ಮೂರ್ನಾಡು, ಡಿ. 29 : ಪ್ರೇಮದ ವಿಚಾರದಲ್ಲಿ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣನಾದ ಘಟನೆ ಮೂರ್ನಾಡು ಕೋಡಂಬೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೋಡಂಬೂರು ಗ್ರಾಮದ ಬಡುವಂಡ ಸುಬ್ರಮಣಿ ಅವರ ಲೈನ್ ಮನೆಯ ಕೂಲಿಕಾರ್ಮಿಕ ಗಣೇಶ ಹಾಗೂ ಬೋಜಿ ದಂಪತಿಗಳ ಪುತ್ರ ಯತೀಶ್(22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಯುವತಿಯೊರ್ವಳನ್ನು ಪ್ರೇಮಿಸುತ್ತಿದ್ದು, ಈ ವಿಚಾರದಲ್ಲಿ ಮನನೊಂದು ಗುರುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.