ಮಡಿಕೇರಿ, ಡಿ. 29: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಪ್ರಯುಕ್ತ ತಾ. 30ರಂದು (ಇಂದು) ಸಂಜೆ 5 ಗಂಟೆಯಿಂದ ಸಂಘದ ಕಟ್ಟಡದಲ್ಲಿ ಕಡಗದಾಳು ಗ್ರಾಮದ ಅನ್ನದಾತರನ್ನು ಸನ್ಮಾನಿಸುವ ಜೈ ಕಿಸಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಅವಿನಾಶ್ ಬೊಟ್ಲಪ್ಪ ತಿಳಿಸಿದ್ದಾರೆ.