ಮಡಿಕೇರಿ, ಡಿ. 28: ನಗರದ ದೇಚೂರು ಕೊಡವ ಕೇರಿ ಸಂಘದ ವತಿಯಿಂದ ತಾ. 29 ರಂದು (ಇಂದು) ಪುತ್ತರಿ ಓರ್ಮೆ ಕಾರ್ಯಕ್ರಮ ಕೊಡವ ಸಮಾಜದಲ್ಲಿ ನಡೆಯಲಿದೆ. ಅಧ್ಯಕ್ಷ ಮಾದೆಯಂಡ ರವಿ ಕುಂಞಪ್ಪ ಅಧ್ಯಕ್ಷತೆಯಲ್ಲಿ ಬೆಳಿಗ್ಗೆಯಿಂದ ವಿವಿಧ ಕಾರ್ಯಕ್ರಮ ಗಳು ನಡೆಯಲಿದ್ದು, ಅತಿಥಿಗಳಾಗಿ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರುಗಳು ಪಾಲ್ಗೊಳ್ಳಲಿದ್ದಾರೆ.