ಮಡಿಕೇರಿ, ಡಿ. 28: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವದು ತಮ್ಮ ಅಭಿಲಾಷೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಹೇಳಿದ್ದಾರೆ.ವೀರಾಜಪೇಟೆ ಕ್ಷೇತ್ರದಿಂದ ವೀಣಾ ಅಚ್ಚಯ್ಯ ಸ್ಪರ್ಧಿಸಲಿದ್ದಾರೆ ಎಂದು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು, ಈ ಕುರಿತು ತಮಗೆ ಯಾವದೇ ಅರಿವು ಇಲ್ಲ. ಪಕ್ಷ ತಮಗೆ ಎಂಎಲ್ಸಿ ಸ್ಥಾನ ನೀಡಿದ್ದು, ಇನ್ನು ನಾಲ್ಕೂವರೆ ವರ್ಷದ ಅಧಿಕಾರಾವಧಿ ಇದೆ. ಈ ಸ್ಥಾನದ ಮೂಲಕ
ಇತರರಿಗೆ ಅವಕಾಶ ಸಿಗಲಿ: ವೀಣಾ
(ಮೊದಲ ಪುಟದಿಂದ) ಜನಸೇವೆ ಮಾಡುವದು ತಮ್ಮ ಗುರಿ ಎಂದರು. ಟಿಕೆಟ್ ವಿಚಾರದಲ್ಲಿ ಇತರರಿಗೂ ಅವಕಾಶ ಸಿಗಲಿ ಎಂಬದು ತಮ್ಮ ಚಿಂತನೆ. ಪಕ್ಷಕ್ಕೆ ಸಕ್ರಿಯರಾಗಿ ದುಡಿದಿರುವವರಿಗೆ ಈ ಬಾರಿ ಟಿಕೆಟ್ ಸಿಗುವಂತಾಗಲಿ, ತಾವು ಎಂಎಲ್ಸಿಯಾಗಿ ಜನಪರ ಕೆಲಸ ನಿರ್ವಹಿಸುವದಾಗಿ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.