ಗೋಣಿಕೊಪ್ಪಲು. ಡಿ. 28: ‘ಕೊಡಗು ಧ್ವನಿ’ವಾರಪತ್ರಿಕೆಯ 9ನೇ ವರ್ಷದ ವಿಶೇಷ ಸಂಚಿಕೆ ಹಾಗೂ 2018 ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಗೋಣಿಕೊಪ್ಪಲುವಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ತಾ. 29ರಂದು (ಇಂದು) ನಡೆಯಲಿದೆ. ‘ಕೊಡಗು ಧ್ವನಿ’ ಸಂಪಾದಕ ಹೆಚ್.ಕೆ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 9ನೇ ವರ್ಷದ ವಿಶೇಷ ಸಂಚಿಕೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಭಾಗದ ಕಳ್ಳಚಂಡ ಧನು ಬಿಡುಗಡೆ ಮಾಡಲಿದ್ದಾರೆ, 2018ರ ಕ್ಯಾಲೆಂಡರ್ ಬಿಡುಗಡೆಯನ್ನು ಗೋಣಿಕೊಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷ ಕುಲ್ಲೇಟೀರ ಪ್ರವಿಮೊಣ್ಣಪ್ಪ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷÀ ಸಣ್ಣುವಂಡ ಕಿಶೋರ್ ನಾಚಪ್ಪ ಹಾಗೂ ‘ಕೊಡಗು ಧ್ವನಿ’ ವಾರಪತ್ರಿಕೆಯ ಉಪ ಸಂಪಾದಕ ಹೆಚ್.ಜೆ.ರಾಕೇಶ್ ವಹಿಸಲಿದ್ದಾರೆ.