ಮಡಿಕೇರಿ, ಡಿ. 28: ಮಡಿಕೇರಿ ನಗರದ ಹೊಸಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಾಲಯದ 17ನೇ ವರ್ಷದ ವಾರ್ಷಿಕೋತ್ಸವ ತಾ. 29 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಸ್ಥಳ ಶುದ್ಧಿ, ಪುಣ್ಯಾಹ, 9 ಗಂಟೆಗೆ ಸಾಮೂಹಿಕ ಗಣಪತಿ ಹೋಮ, 10.30 ಗಂಟೆಗೆ ಮೃತ್ಯುಂಜಯ ಹೋಮ, 12.30 ಗಂಟೆಗೆ ಮಹಾಪೂಜೆ ನಂತರ 1 ಗಂಟೆಗೆ ಅನ್ನಸಂತರ್ಪಣೆ ಹಾಗೂ ಸಂಜೆ 6 ಗಂಟೆಗೆ ದುರ್ಗಾಪೂಜೆ, ರಂಗಪೂಜೆ, 7.30 ಗಂಟೆಗೆ ಮಹಾಪೂಜೆ ನಂತರ ಪ್ರಸಾದ ವಿತರಣೆ ನಡೆಯಲಿದೆ.