ಶ್ರೀಮಂಗಲ, ಡಿ. 26: ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ಯುಕೊ ಕೊಡವ ಮಂದ್ ನಮ್ಮೆಯಲ್ಲಿ ಕೊಂಬೊ ಮೀಸೆರ ಬಂಬೊ ಹಾಗೂ ಬೋಜ ಜಡೆರ ಬೋಜಕ್ಕ ಸ್ಪರ್ಧೆ ನೆರೆದಿದ್ದ ಜನರಿಗೆ ಮುದ ನೀಡಿತು. ಸ್ಪರ್ಧೆಯಲ್ಲಿ ಉತ್ಸಾಹದಿಂದ ಹಲವಾರು ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡರು.
ಕೊಡವ ಸಮುದಾಯ ಹಾಗೂ ಪರಂಪರೆಯ ಪ್ರತೀಕವಾಗಿರುವ ಪುರುಷರು ಮೀಸೆ ಬಿಡುವ ಸಂಸ್ಕøತಿ ಹಾಗೂ ಮಹಿಳೆಯರು ನೀಳ ಜಡೆ ಬಿಡುವ ಸಂಸ್ಕøತಿ ಬೆಳೆದು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಕøತಿ ಕಡಿಮೆಯಾಗುತ್ತಿದ್ದು, ಇದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯುಕೊ ಈ ಪೈಪೋಟಿಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮೀಸೆ ಬಿಟ್ಟ ಪುರುಷರು ತಮ್ಮ ಮೀಸೆಯನ್ನು ತಿರುವುತ್ತಾ ಪೌರುಷವನ್ನು ಹೆಮ್ಮೆಯಿಂದ ತೋರಿದರು.
ಮಹಿಳೆಯರು ತಮ್ಮ ಸೌಂದರ್ಯದ ಪ್ರತೀಕವಾದ ನೀಳ ಜಡೆಯನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದ ಜನರಿಗೆ ಆಕರ್ಷಣೆ ನೀಡಿದರು.
ಕೊಂಬೊ ಮೀಸೆರ ಬಂಬೊ ಸ್ಪರ್ಧೆಯಲ್ಲಿ ಪ್ರಥಮ ಮುದ್ದಂಡ ಕುಂಞಪ್ಪ, ದ್ವಿತೀಯ ಮುದ್ದಂಡ ಬಾಬು ಕುಂಞಪ್ಪ ತೃತೀಯ ಕಾಯಪಂಡ ಅಪ್ಪಣ್ಣ ಪಡೆದುಕೊಂಡರೆ, ಬೋಜಿ ಜಡೆರ ಬೋಜಕ್ಕ ಸ್ಪರ್ಧೆಯಲ್ಲಿ ಪ್ರಥಮ ಪಾಸುರ ರೇಣು ಗಣಪತಿ ಗಳಿಸಿ ತಮ್ಮ ಕೇಶ ಸೌಂದರ್ಯದಿಂದ ಮೆರೆದರು.
ಮಕ್ಕಳಿಗೆ ನಡೆದ ನಾಡ ಮಣ್ಣ್ ನಾಡ ಕೂಳ್ ಪ್ರಬಂಧ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿರುಗೂರುವಿನ ಯಕ್ಷಿತ ಪ್ರಥಮ, ದ್ವಿತೀಯ ದಿವ್ಯ ವೈ.ಎಸ್, ತೃತೀಯ ರಾಕೇಶ್. ಎಸ್.ಡಿ. ಕಳತ್ಮಾಡು ಲಯನ್ಸ್ ಹೈಸ್ಕೂಲ್ ವಿಭಾಗದಲ್ಲಿ ಪ್ರಥಮ ಗೋಕುಲ ತಿಮ್ಮಯ್ಯ, ದ್ವಿತೀಯ ಪೊನ್ನಮ್ಮ ಎಸ್.ಎಂ, ತೃತೀಯ ದೃಶ್ಯ ದೇಚಕ್ಕ ಎ.ಎಂ, ಹಾಗೂ ಕಾಲೇಜು ವಿಭಾಗದಲ್ಲಿ ಲಯನ್ಸ್ ಕಾಲೇಜು ಕಳತ್ಮಾಡುವಿನ ದೀಕ್ಷ ಬಿ.ಬಿ. ಪ್ರಥಮ, ದ್ವಿತೀಯ ಕರೀನಾ ಎ.ಬಿ, ತೃತೀಯ ಪೊನ್ನಮ್ಮ ಕೆ.ಎನ್ ಪಡೆದುಕೊಂಡರು.