ನಾಪೆÇೀಕ್ಲು, ಡಿ. 26: ಸಮೀಪದ ಕುಂಜಿಲ - ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದ ನೆಟ್ಟುಮಾಡು ಶ್ರೀ ಭಗವತಿ ದೇವಳದ ದ್ವಾರದ ಬಳಿಯಿರುವ ಕಾಣಿಕೆ ಹುಂಡಿಯನ್ನು ಸೋಮವಾರ ರಾತ್ರಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಬಡಕಡ ರಮೇಶ್ ತಿಮ್ಮಯ್ಯ ನಾಪೆÇೀಕ್ಲು ಪೆÇಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಸ್ಥಳಕ್ಕಾಗಮಿಸಿದ ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ನಂಜುಂಡ ಸ್ವಾಮಿ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಆರೋಪಿಯ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.