ಕುಶಾಲನಗರ, ಡಿ. 26: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ತಾಲೂಕು ರಚಿಸ ಬೇಕೆಂದು ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಮಂಗಳವಾರ ಗುಡ್ಡೆಹೊಸೂರು ಸ್ಥಾನೀಯ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡು ಪ್ರತಿಭಟನೆ ನಡೆಸಿದರು.
ಕಾರು ನಿಲ್ದಾಣದ ಗುಂಡೂರಾವ್ ವೇದಿಕೆಯಲ್ಲಿ ನಡೆದ ಧರಣಿಯಲ್ಲಿ ಸಮಿತಿ ಅಧ್ಯಕ್ಷ ಕೆ.ಕೆ. ಪೂವಯ್ಯ ನೇತೃತ್ವದಲ್ಲಿ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ನೂತನ ತಾಲೂಕಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ ನಂತರ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು.
ಧರಣಿಯಲ್ಲಿ ಸ್ಥಾನೀಯ ಸಮಿತಿ ಉಪಾಧ್ಯಕ್ಷ ಬಿ.ಎನ್. ಶುಭಶೇಖರ್, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರುಗಳಾದ ಕಾವೇರಪ್ಪ, ಪ್ರವೀಣ್, ಪ್ರಸನ್ನ, ಪುಷ್ಪ, ಡಾಟಿ, ರವಿ, ನಾರಾಯಣ, ಸಮಿತಿ ಪ್ರಮುಖರಾದ ಬಿ.ಕೆ.ಮೋಹನ್, ಎಂ.ಆರ್.ಮಾದಪ್ಪ, ಹೆಚ್.ಪ್ರಕಾಶ್, ಏಸು, ಸುರೇಶ್, ಗುಡ್ಡೆಮನೆ ಅಶ್ವಥ್ ಮತ್ತಿತರರು ಇದ್ದರು.