*ಗೋಣಿಕೊಪ್ಪಲು, ಡಿ. 23 : ಶಿಕ್ಷಣದ ಮೂಲಕವಷ್ಟೇ ತಮ್ಮ ಪ್ರತಿಭೆಗೆ ವೇದಿಕೆ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ದಲ್ಲಿ ಮಧ್ಯಪ್ರದೇಶ ಭೂಪಾಲ್‍ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಗೆ ಆಯ್ಕೆಯಾದ ಮತ್ತು ಹಿಮಾಲಯ ಪರ್ವತವೇರಿದ ಸಾಹಸಿ ಗರನ್ನು ಅಭಿನಂದಿಸಿ ಮಾತನಾಡಿದರು.

ಅವಕಾಶಗಳಿಂದ ವಂಚಿತರಾಗುತ್ತಿ ರುವ ವನವಾಸಿಗಳಿಗೆ ವೇದಿಕೆ ಕಲ್ಪಿಸಬೇಕಾಗಿದೆ. ದೃಢ ಮನಸ್ಸು ಗೆಲ್ಲುವ ಛಲ, ಗುರಿ ಇದ್ದರೆ, ಸಾಹಸದ ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಭೂಪಾಲ್‍ನಲ್ಲಿ ನಡೆಯಲಿರುವ ಬಿಲ್ಲುಗಾರಿಕೆ ಸ್ಪರ್ಧೆಗೆ ತಿತಿಮತಿಯಿಂದ ಮೂವರು ಯುವಕರು ಹಾಗೂ ಮೂವರು ಯುವತಿಯರು ಸೇರಿದಂತೆ ಆರು ಮಂದಿ

(ಮೊದಲ ಪುಟದಿಂದ) ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಟಿ.ಎಸ್. ರಾಜೇಂದ್ರ, ಮಂಜು, ದಮಯಂತಿ, ಗಣೇಶ್, ಕನ್ಯಾಕುಮಾರಿ, ಗೀತಾ. ವೈ.ಆರ್, ಸ್ಪರ್ಧೆಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭ ವನವಾಸಿ ಕಲ್ಯಾಣ ಜಿಲ್ಲಾಧ್ಯಕ್ಷ ಸಿದ್ದ, ಉಪಾಧ್ಯಕ್ಷ ರಾಜು, ಪೂರ್ಣವತಿ, ಸುಭಾಷ್ ಕಾರ್ಯದರ್ಶಿ ಪ್ರಭುಕುಮಾರ್, ಸದಸ್ಯರುಗಳಾದ ಮಣಿ, ಕೋಶಾಧಿಕಾರಿ ಮನು ನಂಜಪ್ಪ, ಸಂಚಾಲಕ ಚಕ್ಕೇರ ಮನು, ಜಿ.ಟಿ. ಬೋಪಯ್ಯ, ಎಂ.ಎನ್. ಕೃಷ್ಣ, ಗಾನಂಗಡ ಪ್ರೇಮ್, ಆರ್.ಎಂ.ಸಿ. ಸದಸ್ಯ ಹೆಚ್.ಎನ್. ಮೋಹನ್ ರಾಜ್, ಗ್ರಾ.ಪಂ. ಸದಸ್ಯ ಹಾಗೂ ವನವಾಸಿ ಕಲ್ಯಾಣದ ಸದಸ್ಯ ಅನೂಪ್, ಬಿ.ಜೆ.ಪಿ. ವರ್ತಕ ಪ್ರಕೋಷ್ಠ ಅಧ್ಯಕ್ಷ ಗಿರೀಶ್ ಗಣಪತಿ, ಫೆಡರೇಶನ್ ನಿರ್ದೇಶಕ ಮಧು ದೇವಯ್ಯ, ಬಿ.ಜೆ.ಪಿ. ಸ್ಥಾನೀಯ ಸಮಿತಿ ಕಾರ್ಯದರ್ಶಿ ಹೆಚ್.ಬಿ. ಗಣೇಶ್, ಸ್ಥಳೀಯ ಕಾಫಿ ಬೆಳೆಗಾರ ಸಿ.ಎ. ಕಾರ್ಯಪ್ಪ ಹಾಜರಿದ್ದರು.