ವೀರಾಜಪೇಟೆ, ಡಿ.24: ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಪೊಲೀಸರು ನಿಷ್ಪಕ್ಷಪಾತವಾಗಿ ಉತ್ತಮ ಸೇವೆ ಸಲ್ಲಿಸುವಂತಾಗಬೇಕು. ಸೇವೆಯಲ್ಲಿ ಶಿಸ್ತು ದಕ್ಷತೆಯನ್ನು ಕಾಪಾಡಿಕೊಂಡು ಇಲಾಖೆಗೆ ಸಂಬಂಧಿಸಿದಂತೆ ದೂರುಗಳು, ಅರ್ಜಿಗಳಿಗೆ ನೇರವಾಗಿ ಸ್ಪಂದಿಸಬೇಕು ಎಂದು ಮೈಸೂರು ದಕ್ಷಿಣ ವಿಭಾಗದ ಇನ್ಸಪೆಕ್ಟರ್ ಜನರಲ್ ಆಫ್

(ಮೊದಲ ಪುಟದಿಂದ) ಪೊಲೀಸ್ ವಿಪುಲ್ ಕುಮಾರ್ ಹೇಳಿದರು.

ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಗಳಿಗೆ ಇಂದು ಭೇಟಿ ನೀಡಿದ ವಿಪುಲ್ ಕುಮಾರ್ ಅವರು, ಪೊಲೀಸ್ ಠಾಣೆಗಳ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿದ ಪೊಲೀಸರ ವಸತಿ ಗೃಹಗಳು, ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳ ಕಟ್ಟಡಗಳು, ಠಾಣೆಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರಲ್ಲದೆ ಅಪರಾಧ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ವಾಹನಗಳನ್ನು ಪರಿಶೀಲಿಸಿದರು.

ಐ.ಜಿ.ಭೇಟಿ ಸಂದರ್ಭ ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಉಪ ನಿರೀಕ್ಷಕರುಗಳಾದ ಸಂತೋಷ್ ಕಶ್ಯಪ್, ಸುರೇಶ್ ಬೋಪಣ್ಣ ಇತರರು ಹಾಜರಿದ್ದರು.