ಆಲೂರುಸಿದ್ದಾಪುರ/ ಒಡೆಯನಪುರ, ಡಿ. 24: ಧರ್ಮದ ಬುನಾದಿಯಲ್ಲಿ ಮನುಜ ನಡೆದಲ್ಲಿ ಮಾತ್ರ ಆತ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯ ಎಂದು ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು, ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ಕೊಡ್ಲಿಪೇಟೆ, ವಲಯ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಕೊಡ್ಲಿಪೇಟೆ ವಲಯ ಧರ್ಮಸ್ಥಳ ಗ್ರಾಮಭಿವೃದ್ಧಿ ವತಿಯಿಂದ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಇಂದು ಮನುಷ್ಯ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಅದನ್ನು ಇಂದು ದೇವಾಲಯ, ಮಂದಿರ, ಮಸೀದಿಗಳಲ್ಲಿ ಹುಡುಕುವ ಪ್ರಯತ್ನ ಮಾಡುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ನಮ್ಮ ಅಚಾರ ವಿಚಾರಗಳನ್ನು ಕಲಿಸುವ ಮೂಲಕ ಮಾನವನ ಪರಿವರ್ತನೆಯನ್ನು ಮಾಡುವ ಕೆಲಸವನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮಾಡುತ್ತಿದೆ ಎಂದರು.
(ಮೊದಲ ಪುಟದಿಂದ)
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಹಕಾರಿಯಾಗುತ್ತಿದೆ ಎಂದರು.
ಮತ್ತೋರ್ವ ಅತಿಥಿಯಾಗಿ ಪಾಲ್ಗೊಂಡಿದ್ದ ಸೋಮವಾರಪೇಟೆ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಯೋಜನಾಧಿಕಾರಿ ಪ್ರಕಾಶ್ ವೈ., ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ವರ್ಷ ಪೂರ್ತಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವದರಿಂದ ಒಂದಷ್ಟು ಬಿಡುವು ಮಾಡಿಕೊಂಡು ಧಾರ್ಮಿಕ ಚಟುವಟಿಕೆಗಳತ್ತ ಅಸಕ್ತಿ ತೋರಿ ತಮ್ಮ ನೆಮ್ಮದಿ ಕಾಣಲಿ ಎಂಬ ಉದ್ದೇಶ ದಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘವು ವಲಯ ಮಟ್ಟದಲ್ಲಿ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಕಾಂತ್‍ರಾಜ್, ಮಂಜುನಾಥ್, ಕೊಡ್ಲಿಪೇಟೆ ವಲಯದ ಮೇಲ್ವಿಚಾರಕ ಸುಬ್ರಮಣ್ಯ, ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಕೃಷಿ ಅಧಿಕಾರಿ ಗೀತಾ, ಬಾಲಕೃಷ್ಣ, ಭುವನೇಶ್ವರಿ ಹರೀಶ್, ಗೀತಾಹರೀಶ್, ಶಾಹೀನ್, ನಟರಾಜ್, ಸೇವಾ ಪ್ರತಿನಿದಿಗಳಾದ ಶೈಲಾ, ಶರತ್, ಪವನ್, ನಳಿನಿ, ಯಶೋದ, ಶೋಭಾ, ನೇತ್ರಾವತಿ ಮುಂತಾದವರಿದ್ದರು.