ಕುಶಾಲನಗರ, ಡಿ. 27: ವಿಜಯಪುರದ ವಿದ್ಯಾರ್ಥಿನಿ ದಾನಮ್ಮಳನ್ನು ಅತ್ಯಾಚಾರಗೈದು ಕೊಲೆಗೈದ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.
ಕ್ಯಾಂಪಸ್ ಫ್ರಂಟ್ ಇಂಡಿಯಾದ ರಾಜ್ಯ ಸಮಿತಿ ಕೋಶಾಧಿಕಾರಿ ಅಬು ತಾಹಿರ್, ಸಿಎಫ್‍ಐ ಜಿಲ್ಲಾ ಸಮಿತಿ ಅಧ್ಯಕ್ಷ ತೈಸಿರ್, ಸದಸ್ಯರಾದ ಮಂಜಿರ್, ರಮೀಜ್, ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಮುಖಂಡ ಕೀರ್ತಿರಾಜು, ಆಕಾಶ್ ಮತ್ತಿತರರು ಇದ್ದರು.