ಶ್ರೀಮಂಗಲ, ಡಿ. 27: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ಪೊನ್ನಂಪೇಟೆಯ ಪ್ರಶಾಂತಿ ನಿಲಯದ ಸಾಯಿಶಂಕರ ವಿದ್ಯಾಸಂಸ್ಥೆಗಳು, ಗೋಣಿಕೊಪ್ಪದ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ), ಗೋಣಿಕೊಪ್ಪದ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಹಾಗೂ ಗೋಣಿಕೊಪ್ಪ ಕರೆಯೋಗಂ ಮತ್ತು ಶ್ರೀ ಲಕ್ಷ್ಮಿ ಮಹಿಳಾ ವಿಭಾಗದ ಸಂಘ, ಮಾಯಮುಡಿ ಗ್ರಾ.ಪಂ, ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ನೀಡಿದರು.

ಈ ಸಂದÀರ್ಭ ಸಾಯಿಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಳೇರ ಝರು ಗಣಪತಿ, ಪ್ರಾಂಶುಪಾಲರಾದ ಹೀರೇಗೌಡ, ಸಂಸ್ಥೆಯ ಬೊಟ್ಟಂಗಡ ದಶಮಿ, ಅರಮಣಮಾಡ ಸತೀಶ್, ಆಶಾ ಪ್ರಕಾಶ್, ಸುಮತಿ, ಕಾಂತರಾಜು, ಹರೀಶ್ ದೇವಯ್ಯ, ಭೀಮಯ್ಯ, ಚಕ್ಕೇರ ಸುಬ್ಬಯ್ಯ, ವಿಠಲ, ತಮ್ಮಿ ದೇವಯ್ಯ, ಉಪನ್ಯಾಸಕರು ಹಾಗೂ ಬಿ.ಎಡ್ ವಿದ್ಯಾರ್ಥಿಗಳು, ಎಸ್.ಎನ್.ಡಿ.ಪಿ.ಯ ಅಧ್ಯಕ್ಷ ಕೆ.ಜೆ. ಜಯೇಂದ್ರ, ಕಾರ್ಯದರ್ಶಿ ಕೆ.ವಿ. ಶಂಕರ್, ಗೌರವಾಧ್ಯಕ್ಷ ಪಿ.ಕೆ. ವಿಜಯನ್, ಪ್ರಮುಖರಾದ ಸುಬ್ರಮಣಿ ಎಂ.ಎಸ್. ಡಿ. ರಾಜನ್, ಪಿ.ಜಿ. ರಾಜಶೇಖರ್, ರಮಶಂಕರ್, ಜಿತೇಂದ್ರ, ಸಹದೇವನ್, ಎಂ.ಪಿ. ರಮಾವತಿ, ವಲ್ಸರಾಜ್, ಪ್ರೇಮನ್, ಅಶೋಕ್, ಸೂರ್ಯ, ಕೆ.ಡಿ. ರಾಜೇಂದ್ರ, ಸಿ.ಕೆ. ರಾಜೇಂದ್ರನ್, ಮೋಹನ್ ರಾಜ್, ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಅಧ್ಯಕ್ಷ ಕೆ.ಬಿ. ಸಂಜೀವ್, ಕಾರ್ಯದರ್ಶಿ ಬಿ. ಅಜಿತ್, ಮಾಯಮುಡಿ ಗ್ರಾ.ಪಂ. ಅಧ್ಯಕ್ಷಯರಾದ ಭವಾನಿ ಮೋಹನ್, ಉಪಾಧ್ಯಕ್ಷೆ ಗೌರಿ ರಮಾ, ಸದಸ್ಯರಾದ ಸಿ.ಕೆ. ಚಿಣ್ಣಪ್ಪ, ಮಣಿಕಂಠ, ರುಕ್ಮಿಣಿ, ಮಮತಾ, ಸೌಮ್ಯ ಮೊಣ್ಣಪ್ಪ, ಶೋಭಾ ರಾಣಿ, ಕುಂತಿ ಅಚ್ಚಪ್ಪ, ಶಿಲ್ಪ ರಾಯ್ ಮತ್ತಿತರರು ಭಾಗವಹಿಸಿದ್ದರು.

ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಮಾಚಯ್ಯ, ಸಂಚಾಲಕ ಎಂ.ಎಂ. ರವೀಂದ್ರ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಪ್ರಮುಖರಾದ ತಮ್ಮಿ ದೇವಯ್ಯ, ವಕೀಲರಾದ ಸಂದೇಶ್ ನೆಲ್ಲಿತಾಯ, ದಯಾ ಚಂಗಪ್ಪ, ಕಂದಾ ಸುಬ್ಬಯ್ಯ, ಮೂಕಳೇರ ಲಕ್ಷಣ್, ಸೇರಿದಂತೆ ಬೆಂಬಲ ನೀಡಿದ ಸಂಘ ಸಂಸ್ಥೆಯ ಮುಖಂಡರು ತಾಲೂಕು ರಚನೆಯಾಗುವವರೆಗೆ ಹೋರಾಟ ನಡೆಸುವ ಬಗ್ಗೆ ಹಾಗೂ ಇದಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಕರೆ ನೀಡಿದರು. ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಪ್ರತಿಭಟನೆ ನಡೆಯುತ್ತಿರುವ ಗಾಂಧಿ ಪ್ರತಿಮೆ ಎದುರು ಅರ್ಧ ಗಂಟೆಗಳ ಕಾಲ ಮಾನವ ಸರಪಳಿ ರಚಿಸಿ ರಸ್ತೆ ಪೊನ್ನಂಪೇಟೆ ತಾಲೂಕು ಪುನರ್‍ರಚನೆ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಾ, ಸರಕಾರಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದು, ಇದಕ್ಕೆ ಪೂರಕ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಬೇಟಿ ಮಾಡಿ ಮನವಿ ಸಲ್ಲಿಸಿತು.

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊನ್ನಂಪೇಟೆ ತಾಲೂಕು ರಚನೆ ಈ ಹಿಂದೆ ಇದ್ದ ತಾಲೂಕು, ತಾಲೂಕಿಗೆ ಅರ್ಹತೆ ಇರುವ ಅಂಶಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಮಿತಿಯ ನಿಯೋಗ ಸಲ್ಲಿಸಿದೆ.

ಇದೇ ಸಂದರ್ಭ ಎಡಿಸಿ ಸತೀಶ್ ಕುಮಾರ್ ಅವರನ್ನು ನಿಯೋಗ ಭೇಟಿ ಮಾಡಿ ಮನವಿ - ದಾಖಲೆ ಸಲ್ಲಿಸಿತು. ತದನಂತರ ಹಿರಿಯ ರಾಜಕಾರಣಿ ಯಂ.ಸಿ. ನಾಣಯ್ಯ ಅವರನ್ನು ನಿಯೋಗ ಭೇಟಿ ಮಾಡಿ ಚರ್ಚಿಸಿತು.

ನಿಯೋಗದಲ್ಲಿ ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ, ಪ್ರಮುಖರಾದ ಪೊಕ್ಕಳಿಚಂಡ ಪೂಣಚ್ಚ, ಚೆಪ್ಪುಡಿರ ಪೊನ್ನಪ್ಪ, ಮತ್ರಂಡ ಅಪ್ಪಚ್ಚು, ಕೊರಕುಟ್ಟಿರ ಸರಾ ಚಂಗಪ್ಪ, ಕೋಳೆರ ದಯಾ ಚಂಗಪ್ಪ, ಆಲೀರ ಎರ್ಮು ಹಾಜಿ, ಐನಂಡ ಬೋಪಣ್ಣ, ತೀತಿರ ಧರ್ಮಜ ಉತ್ತಪ್ಪ ಇತರರು ಹಾಜರಿದ್ದರು.