ಶ್ರೀಮಂಗಲ, ಡಿ. 26: ಯುಕೊ ಸಂಘಟನೆ ಹಾಗೂ ಕೊಡವ ಸಮಾಜ ಆಯೋಜಿಸಿದ್ದ 4ನೇ ವರ್ಷದ ಯುಕೊ ಕೊಡವ ಮಂದ್ ನಮ್ಮೆಯಲ್ಲಿ 2 ದಿನಗಳು ವಿವಿಧ ಸಾಂಸ್ಕøತಿಕ ಪೈಪೋಟಿಯಲ್ಲಿ ಮಕ್ಕಂದೂರಿನ ಉಮ್ಮೇಟಿ ಮಂದ್ ಸಮಗ್ರ ಪ್ರಶಸ್ತಿ ಪಡೆಯುವ ಮೂಲಕ ಗಟ್ಟಿಮಂದ್ ಪಾರಿತೋಷಕ ಹಾಗೂ ರೂ. 25 ಸಾವಿರ ನಗದನ್ನು ತನ್ನದಾಗಿಸಿಕೊಂಡಿತು.
ಕಳೆದ 4 ವರ್ಷದಿಂದ ನಡೆಯುತ್ತಿರುವ ಮಂದ್ ನಮ್ಮೆಯಲ್ಲಿ 3 ಬಾರಿ ಉಮ್ಮೇಟಿ ಮಂದ್ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ಒಂದು ಬಾರಿ ಕುಂಜಿಲಗೇರಿಯ ಊರ್‍ಚಾಲ್ ಮಂದ್ ಗಟ್ಟಿಮಂದ್ ಪ್ರಶಸ್ತಿ ಪಡೆದಿತ್ತು.
2014ರಲ್ಲಿ ಕಡಗದಾಳುವಿನ ಉರುಳಿ ಅಂಬಲದಲ್ಲಿ ನಡೆದ ಮಂದ್ ನಮ್ಮೆಯಲ್ಲಿ, 2016ರಲ್ಲಿ ನಡೆದ ಮೂರ್ನಾಡು ಮಂದ್ ನಮ್ಮೆ ಹಾಗೂ ಇದೀಗ 2017ರಲ್ಲಿ ಗೋಣಿಕೊಪ್ಪದಲ್ಲಿ ನಡೆದ ಮಂದ್ ನಮ್ಮೆಯಲ್ಲಿ ಉಮ್ಮೇಟಿ ಮಂದ್ ಸಮಗ್ರ ಪ್ರಶಸ್ತಿ ಪಡೆದಿದೆ. 2015ರಲ್ಲಿ ಬೆಕ್ಕೆಸೊಡ್ಲೂರುವಿನಲ್ಲಿ ನಡೆದ ಮಂದ್ ನಮ್ಮೆಯಲ್ಲಿ ಕುಂಜಿಲಗೇರಿಯ ಊರ್‍ಚಾಲ್ ಮಂದ್ ಗಟ್ಟಿಮಂದ್ ಪ್ರಶಸ್ತಿ ಪಡೆದಿತ್ತು. ಮಂದ್ ನಮ್ಮೆಯಲ್ಲಿ ಉಮ್ಮತ್ತಾಟ್, ಬೊಳಕಾಟ್, ಪರೆಯಕಳಿ, ಬಾಳೋಪಾಟ್ ಹಾಗೂ ನಾಟಕ ಹಾಗೂ ಸಿಂಪೋನಿ ಕಲಾ ತಂಡದಿಂದ, ಖ್ಯಾತ ಕೊಡವ ಹಾಡುಗಾರರಿಂದ ಹಾಡು ಗಮನಸೆಳೆದವು.
ಕೋಲಾಟ್: ಪ್ರಥಮ ಶ್ರೀ ಮಂದತವ್ವ ಮಂದ್ ಬೆಕ್ಕೆಸೂಡ್ಲೂರು, ದ್ವಿತೀಯ ಕುಂಜಿಲಗೇರಿ ಊರ್‍ಚಾಲ್ ಮಂದ್, ತೃತೀಯ ಉಮ್ಮೇಟಿ ಮಂದ್ ಮಕ್ಕಂದೂರ್ ಪಡೆದುಕೊಂಡಿತು.
ಬೊಳಕಾಟ್: ಪ್ರಥಮ ಉಮ್ಮೇಟಿ ಮಂದ್ -ಮಕ್ಕಂದೂರ್, ದ್ವಿತೀಯ ಮಚ್ಚುರೊಡೆ ಮಂದ್ -ಪೇರೂರ್, ತೃತೀಯ ಅಂಜಿಕೇರಿ ಮಂದ್ -ಹುದಿಕೇರಿ ತನ್ನದಾಗಿಸಿಕೊಂಡಿತು.
ಉಮ್ಮತ್ತಾಟ್: ಪ್ರಥಮ ಪೊನ್ನಂಪೇಟೆ ಕೊಡವ ಸಮಾಜ ವಾಡೆ ಮಂದ್, ದ್ವಿತೀಯ ಕೊಡವ ಸಮಾಜ ಮಂದ್ -ಮಡಿಕೇರಿ, ತೃತೀಯ ಅಂಜಿಕೆರಿ ಮಂದ್ -ಹುದಿಕೇರಿ ಮುಡಿಗೇರಿಸಿಕೊಂಡಿತು.
ಪರೆಯಕಳಿ: ಪ್ರಥಮ ಮಚ್ಚುರೊಡೆ ಮಂದ್ -ಪೇರೂರ್, ದ್ವಿತೀಯ ಅಮ್ಮತ್ತಿ ಊರ್ ಮಂದ್ -ಅಮ್ಮತ್ತಿ, ತೃತೀಯ ಗೋಣಿಕೊಪ್ಪ ಕೊಡವ ಸಮಾಜ ಪುದಿಯವಾಡೆ ಮಂದ್ ಜಯಗಳಿಸಿತು.
ಬಾಳೋಪಾಟ್: ನೂರಂಬಡ ನಾಡ್ ಬಿದ್ದಾಟಂಡ ವಾಡೆ -ನಾಪೋಕ್ಲು, ದ್ವೀತಿಯ ಮಚ್ಚುರೊಡೆ ಮಂದ್ ಪೇರೂರ್, ತೃತೀಯ ಉಮ್ಮೇಟಿ ಮಂದ್ ಮಕ್ಕಂದೂರ್ ತನ್ನದಾಗಿಸಿಕೊಂಡಿತು.