ವೀರಾಜಪೇಟೆ, ಡಿ. 26: ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರದಿಂದ ಬಂದ ಅನುದಾನದಿಂದ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು ಸಾರ್ವಜನಿಕ ರಸ್ತೆ ಒತ್ತಿನಲ್ಲಿರುವ ತೋಟದ ಮಾಲೀಕರು ಅಗತ್ಯ ಜಾಗವನ್ನು ನೀಡಿ ಸಹಕಾರ ನೀಡುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಕಾಕೋಟುಪರಂಬಿನಿಂದ ಮೈತಾಡಿ ಗ್ರಾಮಕ್ಕೆ ಹೋಗುವ ರಸ್ತೆಗೆ ರೂ.6 ಲಕ್ಷ ವೆಚ್ಚದಲ್ಲಿ ನೂತನವಾಗಿ ಡಾಂಬರೀಕರಣಗೊಂಡ ರಸ್ತೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಮೈತಾಡಿ ಗ್ರಾಮದ ಮುಖ್ಯ ರಸ್ತೆಗೆ ರೂ.9 ಲಕ್ಷದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ಕಾಕೋಟುಪರಂಬಿನಿಂದ ಮೈತಾಡಿ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಜಿ.ಪಂ.ಯಿಂದ 3 ಲಕ್ಷ ಹಾಗೂ ಶಾಸಕರ ಅನುದಾನದಿಂದ 3 ಲಕ್ಷ ಒಟ್ಟು 6 ಲಕ್ಷ ವೆಚ್ಚದಲ್ಲಿ ಡಾಂಬರೀಕರಣಗೊಂಡಿದ್ದು, ಮೈತಾಡಿ ಗ್ರಾಮದ ಮುಖ್ಯ ರಸ್ತೆ ಹಾಗೂ ಭಟ್ಟಮಕ್ಕಿ ರಸ್ತೆ ಕಾಮಗಾರಿಗೆ ಜಿ.ಪಂ.ಯಿಂದ 3 ಲಕ್ಷ ಅನುದಾನ ದಿಂದ 6 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರುಗಳು ಕಾಮಗಾರಿ ನಡೆಯುವ ಸಂದರ್ಭ ಕಾಮಗಾರಿಯನ್ನು ನೋಡಿಕೊಳ್ಳುವಂತೆ ತಿಳಿಸಿದರು.

ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಗೊಳಿ ಸಲಾಗುವದು ಎಂದರು. ಕಾಕೊಟುಪರಂಬಿನ ರಸ್ತೆ ಉದ್ಘಾಟನೆ ಸಂದರ್ಭ ಅಪ್ಪಚಂಗಡ ಪ್ರಕಾಶ್ ಪೂಣಚ್ಚ, ಮೂಳೆರ ಪ್ರತಾಪ್ ಪೊನ್ನಪ್ಪ, ಮುಲ್ಲೆರ ಮಧು ಮಂಜುನಾಥ್, ಗುಡ್ಡಂಡ್ರ ಮೋಹನ್, ವಿ.ಜಿ.ಗೋಪಾಲಕೃಷ್ಣ, ಅಮ್ಮಂಡಿರ ಗಣಪತಿ, ಮಂಡೆಪಂಡ ತಮ್ಮಯ್ಯ, ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ತಾಲೂಕು ಪಂಚಾಯಿತಿ ಸದಸ್ಯೆ ಆಲತಂಡ ಸೀತಮ್ಮ , ಗ್ರಾ.ಪಂ. ಉಪಾಧ್ಯಕ್ಷೆ ರಾಣಿ, ಸದಸ್ಯರಾದ ಮುಂಡಚಾಡಿರ ನಂದ, ಗ್ರಾಮದ ಐಚೆಟ್ಟಿರ ಅಪ್ಪಚ್ಚು, ಕುಂಡಚಿರ ಚಿಂಗಪ್ಪ, ಆಲತಂಡ ತಿಮ್ಮಯ್ಯ, ಎನ್.ಸಿ. ಕಾರ್ಯಪ್ಪ, ಕೆ.ರವಿ, ಕೀರ್ತನ್, ನಂದ ನಾಚಪ್ಪ ಮುಂತಾದವರು ಉಪಸ್ಥಿತರಿದ್ದರು.