ಸುಂಟಿಕೊಪ್ಪ,ಡಿ.26: 34ನೇ ವರ್ಷದ ಇಸ್ಕಾನ್ ಅಖಿಲಭಾರತ ಪಾದಯಾತ್ರೆಯು ಮಡಿಕೇರಿಯಿಂದ ಬೋಯಿಕೇರಿ, ಕೆದಕಲ್ 7ನೇ ಮೈಲು ಮಾರ್ಗವಾಗಿ ಸುಂಟಿಕೊಪ್ಪಕ್ಕೆ ಅಪರಾಹ್ನ ತಲುಪಿತು.

ಗುಜರಾತ್ ತಳಿಯ 6 ಎತ್ತುಗಳು ಇಸ್ಕಾನ್ ಶ್ರೀ ಕೃಷ್ಣ ವಿಗ್ರಹವನ್ನು ಅಲಂಕೃತ ವಾಹನದಲ್ಲಿ ಕುಳ್ಳಿರಿಸಿ ಪಾದಯಾತ್ರೆಯಲ್ಲಿ ತೆರಳುತ್ತಿರುವದು ಸುಂಟಿಕೊಪ್ಪ ವ್ಯಾಪ್ತಿಯ ಶ್ರೀಕೃಷ್ಣ ಭಕ್ತರ ಕುತೂಲಹಕ್ಕೆ ಕಾರಣವಾಯಿತು. ಇಸ್ಕಾನ್ ಬಳಗದಿಂದ ಸಂಕೀರ್ತನೆಯೊಂದಿಗೆ ಭಕ್ತರಿಗೆ ಪ್ರಸಾದ ಹಂಚುವ ಮೂಲಕ ಭಗವದ್ಗೀತೆಯನ್ನು ಪ್ರಚಾರ ಹಾಗೂ ಮಾರಾಟ ಮಾಡಿದರು

ಸಂಜೆ ಶ್ರೀ ಕೋದಂಡರಾಮ ದೇವಾಲಯದಲ್ಲಿ ಇಸ್ಕಾನ್ ವತಿಯಿಂದ ಸಂಕೀರ್ತನೆ ಮಾಡಲಾಯಿತು. ಅಪಾರ ಭಕ್ತಾಧಿಗಳು ಕೋದಂಡರಾಮ ದೇವಾಲಯದಲ್ಲಿ ಸೇರಿದರು.