ಶ್ರೀಮಂಗಲ, ಡಿ. 24: ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ವತಿಯಿಂದ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿರುವ ಎರಡು ದಿನದ ನಾಲ್ಕನೇ ವರ್ಷದ ಕೊಡವ ಮಂದ್ ನಮ್ಮೆಗೆ ಕಾವೇರಿ ಮಾತೆಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಯುಕೊ ಸಂಘಟನೆ ಮತ್ತು ಗೋಣಿಕೊಪ್ಪ ಕೊಡವ ಸಮಾಜದ ಸಹಕಾರದಲ್ಲಿ ನಡೆಯತ್ತಿರುವ ಮಂದ್ ನಮ್ಮೆಗೆ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡವ ಸಮಾಜದ ಅಧ್ಯಕ್ಷ ಚೆಕ್ಕೇರ ಸೋಮಯ್ಯ ಹಾಗೂ ಹಿರಿಯರಾದ ಡಾ. ಕಾಳಿಮಾಡ ಶಿವಪ್ಪ ಚಾಲನೆ ನೀಡಿದರು. ಇದಕ್ಕೂ ಮೊದಲು ಕೈಕೇರಿಯ ಭಗವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಚೆಕ್ಕೇರ ಸೋಮಯ್ಯ ಕೊಡವ ಸಂಸ್ಕøತಿಯ ಬೇರು ಮಂದ್‍ಗಳಲ್ಲಿ ಅಡಗಿದೆ. ಪದ್ಧತಿಯ ಆಚರಣೆಯಿಂದ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಡಾ. ಶಿವಪ್ಪ, ಮಂದ್‍ಗಳಲ್ಲಿಯೇ ಕೊಡವ ಸಂಸ್ಕøತಿ ಉಳಿದಿದೆ ಹಾಗೂ ಮಂದ್‍ಗಳಿಂದಲೇ ಸಂಸ್ಕøತಿ ಮುಂದಿನ ಪೀಳಿಗೆಗೆ ಹರಡಿದೆ ಎಂಬ ಸತ್ಯವನ್ನು ಅರಿತು
(ಮೊದಲ ಪುಟದಿಂದ) ಮಂದ್ ಗಳನ್ನು ಪುನಃಶ್ಚೇತನಗೊಳಿಸಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ, ಮಂಜು ಚಿಣ್ಣಪ್ಪ ಕಳೆದ ನಾಲ್ಕು ವರ್ಷದಿಂದ ಮಂದ್ ನಮ್ಮೆಯನ್ನು ಆಚರಿಸುತ್ತ ಬರುತ್ತಿದ್ದು, ಈ ಕಾರ್ಯಕ್ರಮ ನಮ್ಮ ಪ್ರತಿಷ್ಠೆಗಾಗಲಿ ಅಥವಾ ಯಾವದೇ ಜನಾಂಗ, ಸಂಘಟನೆಗಳಿಗೆ ಪ್ರತಿಸ್ಪರ್ಧೆ ಮಾಡುವದಕ್ಕಲ್ಲ. ಕೊಡವರಲ್ಲಿ ಒಗ್ಗಟ್ಟು ಇಲ್ಲ ಎನ್ನುವ ಭಾವನೆ ಆಗಾಗ ಕೇಳುತ್ತಿದ್ದು, ಈ ಭಾವನೆಗೆ ಉತ್ತರ ನೀಡಲು ಮಂದ್ ನಮ್ಮೆಯ ಮೂಲಕ ಒಗ್ಗಟ್ಟಿಗೆ ಅರ್ಥ ಕಲ್ಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಇಂದು ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ವೇದಿಕೆಯಲ್ಲಿ ನೆಲ್ಲಮಕ್ಕಡ ಧÀರಣು, ತೀತರಮಾಡ ಬೋಸು, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಮಾದಯ್ಯ, ಅಣ್ಣೀರ ಹರೀಶ್ ಮಾದಪ್ಪ ಉಪಸ್ಥಿತರಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ನಿರೂಪಿಸಿದರು. ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ವಂದಿಸಿದರು.
ಇಂದಿನ ಕಾರ್ಯಕ್ರಮ: ತಾ. 25 ರಂದು (ಇಂದು) ಪೂರ್ವಾಹ್ನ 9 ಗಂಟೆಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ (ಆರ್‍ಎಂಸಿ) ಯಿಂದ ಸಾಂಸ್ಕøತಿಕ ಮೆರವಣಿಗೆಯು ಗೋಣಿಕೊಪ್ಪ ಕಾವೇರಿ ಕಾಲೇಜುವಿನವರೆಗೆ ನಡೆಯಲಿದೆ. 11.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕೊಡವ ಸಾಂಸ್ಕøತಿ-ಜಾನಪದ ಕಲೆಗಳಾದ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಪರೆಯಕಳಿ, ಕೊಂಬ ಮೀಸೆರ ಬಂಬೊ, ಬೋಜಿ ಜಡೆರ ಬೋಜಕ್ಕ, ಪೈಪೋಟಿ ಇರುತ್ತದೆ. ಇದಲ್ಲದೆ, ಕಾಪಳಕಳಿ ಮತ್ತು ಮಾಪಳೆ ಕಳಿರ ವಿಶೇಷ ಪ್ರದರ್ಶನವಿರುತ್ತದೆ.
ಸಭಾ ಕಾರ್ಯಕ್ರಮದಲ್ಲಿ ದ.ಕನ್ನಡ ಸಂಸದ ನಳಿಲ್‍ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಕಮಿಷ್‍ನರ್ ಡಾ. ಕೊಟ್ಟಂಗಡ ಪೆಮ್ಮಯ್ಯ, ಹೈಕೋರ್ಟ್ ವಕೀಲ ಪವನ ಚಂದ್ರ ಶೆಟ್ಟಿ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಅಜ್ಜೀನಿಕಂಡ ವಾಸು ಗಣಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಜಿ.ಪಂ ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಜಿ.ಪಂ ಸದಸ್ಯ ಚಿಯಕ್‍ಪೂವಂಡ ಬೋಪಣ್ಣ, ಬ್ರಹ್ಮಗಿರಿ ಪತ್ರಿಕೆಯ ಸಂಪಾದಕ ಉಳ್ಳಿಯಡ ಪೂವಯ್ಯ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು, ಕಾಫಿ ರಾಷ್ಟ್ರೀಯ ಪಾನಿಯ ಸಂಚಾಲಕ ಮಾಚಿಮಾಡ ಎಂ ರವೀಂದ್ರ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಟ್ರೋಫಿ ಧಾನಿಗಳಾದ ಕೇಚಮಾಡ ಗಣೇಶ್ ಸೋಮಯ್ಯ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ.
ಯುಕೊ ಸಂಘಟನೆಯ ವತಿಯಿಂದ ಹೊರ ತರುತ್ತಿರುವ ಕೊಡವ ಹಾಗೂ ಇಂಗ್ಲಿಷ್ ಭಾಷೆಯ ನೂತನ “ವಾಯ್ಸ್ ಆಫ್ ಕೊಡವ” ಮಾಸ ಪತ್ರಿಕೆಯನ್ನು ವಕೀಲ ಪಾಲೆಕಂಡ ಸುಬ್ಬಯ್ಯ ಬಿಡುಗಡೆ ಮಾಡಲಿದ್ದಾರೆ.