ಮಡಿಕೇರಿ, ಡಿ. 26: ಇಂದು ಉರಿ ಬಿಸಿಲಿನ ನಡುವೆ ಇಲ್ಲಿನ ರಾಜಾಸೀಟ್ ಬಳಿಯ ಬೆಟ್ಟ ಸಾಲಿನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಅಂದಾಜು 20 ಎಕರೆ ಪ್ರದೇಶ ಧಗಧಗನೆ ಹೊತ್ತಿ ಉರಿದು ಹೋಯಿತು. ಆ ಬೆನ್ನಲ್ಲೇ ಧಾವಿಸಿ ಬಂದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್ ಹಾಗೂ ಸಿಬ್ಬಂದಿ, ನಗರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಕೆ.ಜಿ. ಹೊನ್ನಪ್ಪ, ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿ ಹರಸಹಾಸದೊಂದಿಗೆ ಸತತ ಮೂರು ಗಂಟೆಗಳಲ್ಲಿ ಬೆಂಕಿ ನಿಯಂತ್ರಿಸುವಲ್ಲಿ ಸಫಲರಾದರು.

ಮಧ್ಯಾಹ್ನದ ಸುಡು ಬಿಸಿಲಿನ ನಡುವೆ ಬಹುಶಃ ರಾಜಾಸೀಟ್ ಕೆಳ ಭಾಗದ ಬೆಟ್ಟ ಸಾಲಿನ ವ್ಯೂಪಾಯಿಂಟ್‍ನಲ್ಲಿ ಪ್ರವಾಸ ಬಂದಿದ್ದ ಯಾರೋ ತಿಳಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆಯಿದ್ದು, ರಾಜಾಸೀಟ್ ಕೆಳಭಾಗದ ಕಾಡು ತೋಪುವಿನಲ್ಲಿ ಪ್ರವಾಸಿಗರನ್ನು ನಿರ್ಬಂಧಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಬೆಂಕಿ ಕೆನ್ನಾಲಿಗೆ ಚಾಚಿ ಕೊಳ್ಳುತ್ತಿದ್ದರೂ, ಅಲ್ಲಿಗೆ ಅಗ್ನಿಶಾಮಕ ನೀರಿನ ಟ್ಯಾಂಕ್ ತೆರಳಲು ಸಾಧ್ಯವಿಲ್ಲದೆ ರಾಜಾಸೀಟ್ ಗೇಟ್ ಬಳಿ ನಿಲ್ಲು ವಂತಾಯಿತು. ಬೇರೆ ದಾರಿಯಿಲ್ಲದೆ ಸ್ವತಃ ಅಧಿಕಾರಿ ಚಂದನ್ ಹಾಗೂ ಸಿಬ್ಬಂದಿಗಳಾದ ರಘು ನಂದನ್, ಸತೀಶ್, ಸೋಮಣ್ಣ, ಸಂತೋಷ್ ಜೋಡಹಟ್ಟಿ ಮತ್ತಿತರರು ಮರದ ಕೊಂಬೆಗಳಿಂದ ಬೆಂಕಿ ಹರಡದಂತೆ ತಡೆಗಟ್ಟಿದರು.

ಗಂಟೆ ಗಟ್ಟಲೆ ನಡೆದ ಕಾರ್ಯಾ ಚರಣೆಯಲ್ಲಿ

(ಮೊದಲ ಪುಟದಿಂದ) ಬೆಂಕಿ ರಾಜಾಸೀಟ್‍ನತ್ತ ಹರಡದಂತೆ ತಡೆಯುವಲ್ಲಿ ಸಫಲರಾಗುವದ ರೊಂದಿಗೆ ಸಂಜೆಗತ್ತಲೆ ವೇಳೆಗೆ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿತ್ತಾದರೂ, ಈ ಹೊತ್ತಿಗೆ ಅಂದಾಜು 20 ಎಕರೆ ಪ್ರದೇಶ ಹೊತ್ತಿ ಉರಿದಿತ್ತು.

ರಾಜಾಸೀಟ್ ವೀಕ್ಷಣೆಗೆ ಅಧಿಕ