ಮಡಿಕೇರಿ, ಡಿ. 27: ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲ್ಲಿ ಪ್ರತಿ ಮಂಗಳವಾರದಂದು ಜನಸ್ಪಂದನ ದಿನವನ್ನು ಹಮ್ಮಿಕೊಳ್ಳ್ಳಲಾಗಿದೆ.

ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ, ತಹಶೀಲ್ದಾರರು, ಹಾಗೂ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ, ಹೋಬಳಿ ಮಟ್ಟದ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಕಚೇರಿಯಲ್ಲಿ ಪ್ರತಿ ಮಂಗಳವಾರದಂದು ಜನ ಸ್ಪಂದನ ದಿನವನ್ನು ನಡೆಸಲಾಗುತ್ತಿದೆ.

ಸಾರ್ವಜನಿಕರು ತಮ್ಮ ಅಹವಾಲುಗಳಿದ್ದಲ್ಲಿ ಆ ದಿನದಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸ ಬಹುದಾಗಿದೆ. ಪ್ರತಿ ಮಂಗಳ ವಾರದಂದು ಅಪರಾಹ್ನ 3 ಗಂಟೆ ಯಿಂದ ಸಾರ್ವಜನಿಕರು ಅಹವಾಲು ಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.