ಮಡಿಕೇರಿ, ಡಿ.26 : ಪ್ರತ್ಯೇಕ ಕಾವೇರಿ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕು ರಚನೆಯ ಹೋರಾಟಕ್ಕೆ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಬೆಂಬಲ ಸೂಚಿಸಿದೆ. ಜಿಲ್ಲೆಗೆ ಐದು ತಾಲೂಕುಗಳ ಅಗತ್ಯವಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ತಿಳಿಸಿದ್ದಾರೆ.
ಸಂಘದ ಕಾರ್ಯಕಾರಿ ಸಮಿತಿ ಸಭೆ ವೀರಾಜಪೇಟೆಯ ಹಾತೂರಿನ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭೌಗೋಳಿಕವಾಗಿ ಮೂರು ತಾಲೂಕು, ಮೂವರು ಶಾಸಕರುಗಳು ಹಾಗೂ ಸಂಸದರನ್ನು ಹೊಂದಿದ್ದ ಕೊಡಗು ಜಿಲ್ಲೆ ಈಗ ಇಬ್ಬರು ಶಾಸಕರನ್ನು ಹೊಂದುವಂತಾಗಿದೆ. ಸಂಸತ್ ಸ್ಥಾನ ಕೂಡ ಹಂಚಿ ಹೋಗಿದೆ. ಇವೆಲ್ಲವನ್ನು ಅವಲೋಕಿಸಿದಾಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪ್ರಸ್ತುತ ಇರುವ ಮೂರು ತಾಲೂಕನ್ನು 5 ತಾಲೂಕಿಗೆ ವಿಸ್ತರಿಸುವ ಅಗತ್ಯವಿದೆ ಎಂದರು. ಪ್ರತ್ಯೇಕ ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ರಚನೆಯ ಹೋರಾಟದಲ್ಲಿ ಒಕ್ಕಲಿಗರ ಸಂಘ ಪಾಲ್ಗೊಳ್ಳಲಿದೆ ಎಂದು ಚಂಗಪ್ಪ ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಒಕ್ಕಲಿಗ ಜನಾಂಗದ ಕುಟುಂಬಗಳಿದ್ದು, ಸರ್ವರನ್ನು ಸಂಘದ ಸದಸ್ಯರನ್ನಾಗಿ ಕೊಡಗು ಜಿಲ್ಲೆ ಈಗ ಇಬ್ಬರು ಶಾಸಕರನ್ನು ಹೊಂದುವಂತಾಗಿದೆ. ಸಂಸತ್ ಸ್ಥಾನ ಕೂಡ ಹಂಚಿ ಹೋಗಿದೆ. ಇವೆಲ್ಲವನ್ನು ಅವಲೋಕಿಸಿದಾಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪ್ರಸ್ತುತ ಇರುವ ಮೂರು ತಾಲೂಕನ್ನು 5 ತಾಲೂಕಿಗೆ ವಿಸ್ತರಿಸುವ ಅಗತ್ಯವಿದೆ ಎಂದರು. ಪ್ರತ್ಯೇಕ ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ರಚನೆಯ ಹೋರಾಟದಲ್ಲಿ ಒಕ್ಕಲಿಗರ ಸಂಘ ಪಾಲ್ಗೊಳ್ಳಲಿದೆ ಎಂದು ಚಂಗಪ್ಪ ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಒಕ್ಕಲಿಗ ಜನಾಂಗದ ಕುಟುಂಬಗಳಿದ್ದು, ಸರ್ವರನ್ನು ಸಂಘದ ಸದಸ್ಯರನ್ನಾಗಿ ಹೊರಗಿನ ಒಕ್ಕಲಿಗರಾಗಿರುತ್ತಾರೆ. ಮುಂದಿನ ಬಾರಿ ಕೊಡಗಿನ ಒಕ್ಕಲಿಗ ಬಾಂಧವರಿಗೆ ಆದ್ಯತೆ ನೀಡುವ ಹಾಗೆ ಆಗಬೇಕು ಎಂದು ಸಭೆ ಒಮ್ಮತದ ತೀರ್ಮಾನ ತೆಗೆದುಕೊಂಡಿತು.
ಸಂಘದ ಬೆಳವಣಿಗೆ ಕುರಿತು ಹಿರಿಯರಾದ ಡಿ.ಎಸ್. ಸುಬ್ರಮಣಿ, ವಿ.ಎಲ್.ಸುರೇಶ್, ಹಾತೂರಿನ ರಾಮಚಂದ್ರ, ದೊಡ್ಡಮಲ್ತೆಯ ಶ್ರೀಕೃಷ್ಣ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಜಿಲ್ಲಾ ಉಪಾಧ್ಯಕ್ಷ ಬಿ.ಇ.ಶಿವಯ್ಯ, ವಿ.ಪಿ.ಸುರೇಶ್, ಎನ್.ಕೆ.ಅಪ್ಪಸ್ವಾಮಿ, ಕೊಡ್ಲಿಪೇಟೆಯ ಜಯರಾಂ ಮೊದಲಾದವರು ಡಿ.ಎ.ಸುಬ್ರಮಣಿ ಸಲಹೆ ನೀಡಿದರು.
ಸಂಘದ ಗೌರವ ಕಾರ್ಯದರ್ಶಿ ಪಿ.ಉಮೇಶ್ ಕುಮಾರ್ ಕಳೆದ ಮಹಾಸಭೆಯ ವರದಿಯನ್ನು ಕಾರ್ಯಕಾರಿ ಸಮಿತಿಯ ಮುಂದಿ ಟ್ಟರು. ವರದಿಗೆ ಸಭೆ ಅಂಗೀಕಾರ ನೀಡಿತು. ಸಂಘದ ಉಪಾಧ್ಯಕ್ಷ ವಿ.ಕೆ. ದೇವಲಿಂಗಯ್ಯ ಸ್ವಾಗತಿಸಿದರು.