ಮಡಿಕೇರಿ, ಡಿ.26 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಚಲನಚಿತ್ರ ರಂಗದ ಇತಿಹಾಸ ಬಿಂಬಿಸುವ ಸುಮಧುರ ಚಲನಚಿತ್ರ ಗೀತೆಗಳ ‘ಗಾನಯಾನ’ ಕಾರ್ಯಕ್ರಮವು ತಾ. 28 ರಂದು ಸಂಜೆ 6 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಮೈಸೂರಿನ ಗಾಯಕಿ ಸುನಿತಾ ಚಂದ್ರಕುಮಾರ್ ಅವರ ರಘುಲೀಲಾ ಸಂಗೀತ ಮಂದಿರ ಮತ್ತು ತಂಡದವರಿಂದ ಕನ್ನಡ ಚಲನಚಿತ್ರಗಳ ಸುಮಧುರ ಸಂಗೀತ ರಸಸಂಜೆ ಕನ್ನಡ ಚಲನಚಿತ್ರ ಗೀತೆಗಳ ಗಾನಯಾನ ಕಾರ್ಯಕ್ರಮ ಆಯೋಜಿಸಲಾಗಿದೆ.