ಮಡಿಕೇರಿ, ಡಿ. 25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿ ವತಿಯಿಂದ “ಜನಾರೋಗ್ಯವೇ ರಾಷ್ಟ್ರ ಶಕ್ತಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ರಕ್ತದಾನ ಶಿಬಿರ ಹಾಗೂ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಪಾಪ್ಯುಲರ್ ಫ್ರಂಟ್‍ನ ಜಿಲ್ಲಾಧ್ಯಕ್ಷ ಹ್ಯಾರೀಸ್, ನಗರಸಭೆ ಸದಸ್ಯರಾದ ಅಮೀನ್ ಮೊಹಿಸಿನ್, ನೀಮಾ ಹರ್ಷದ್ ಹಾಗೂ ಇನ್ನಿತರರು ರಕ್ತದಾನ ಮಾಡಿದರು. ಗಿಡಕ್ಕೆ ನೀರು ಹಾಕುವದರ ಮೂಲಕ ಕಾರ್ಯಕ್ರಮವನ್ನು ರಕ್ತನಿಧಿ ಅಧಿಕಾರಿಗಳಾದ ಕರುಂಬಯ್ಯ ಉದ್ಘಾಟನೆ ಮಾಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಸುರೇಶ್ ಮಾತನಾಡಿದರು. ಎಸ್.ಡಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ಲಾ ಅಡ್ಕಾರ್, ಪಾಪ್ಯುಲರ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಹಾಗೂ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಇದ್ದರು. ಬಷೀರ್ ಸ್ವಾಗತಿಸಿ, ರಿಜ್ವಾನ್ ವಂದಿಸಿದರು.