*ಸಿದ್ದಾಪುರ, ಡಿ. 25: ಚೆಟ್ಟಳ್ಳಿ ಗ್ರಾಮ ಪಂಚಾತಿ ವ್ಯಾಪ್ತಿಯ ಈರಳೆವಳಮುಡಿ ಸಹಕಾರ ಗೋದಾಮು ಕಡೆಯಿಂದ ಭೂತನಕಾಡು ಲಿಂಕ್‍ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಭೂಮಿ ಪೂಜೆ ನಡೆಸಿದರು.
2.5 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ತಾನು ಈ ಹಿಂದೆ ಜಿ.ಪಂ.ಸದಸ್ಯರಾಗಿದ್ದಾಗ ರಾಜ್ಯದ ಬಿಜೆಪಿ ಸರಕಾರ ಆಡಳಿತದಲ್ಲಿತ್ತು. ಆಗ ಅನುದಾನ ಹೆಚ್ಚಾಗಿ ದೊರಕಿದ್ದು ರೂ. 1 ಕೋಟಿ 20 ಲಕ್ಷದಲ್ಲಿ ರಸ್ತೆ ಕುಡಿಯುವ ನೀರು, ಚರಂಡಿ ಕಾಮಗಾರಿ ನಡೆಸಲಾಗಿತ್ತು ಎಂದು ಹೇಳಿದರು. ಈ ಸಂದರ್ಭ ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಕಂಠಿ ಕಾರ್ಯಪ್ಪ, ಊರಿನ ಪ್ರಮುಖರಾದ ಚೋಳಪಂಡ ನಾಣಯ್ಯ, ಬಿ.ಜೆ.ಉತ್ತಯ್ಯ ಗಣೇಶ, ಬಲ್ಲಾರಂಡ ಗಂಗತಮ್ಮಯ್ಯ ಕೊಕ್ಕೇರ ಮುತ್ತಪ್ಪ,ದೇವಿ ದೇವಯ್ಯ ಉಪಸ್ಥಿತರಿದ್ದರು.