ಶನಿವಾರಸಂತೆ, ಡಿ. 25: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹಾಸನದ ವಿ ಕೇರ್ ಸೂಪರ್ ಸ್ಪೆಷಾಲಿಟಿ ದಂತ ಆಸ್ಪತ್ರೆ ಹಾಗೂ ಶಿವಪ್ರಸಾದ್ ನೇತ್ರಾಲಯ ವತಿಯಿಂದ ಆಶೀರ್ವಾದ ಮೆಡಿಕಲ್ ಸಹಭಾಗಿತ್ವದಲ್ಲಿ ಸಂಚಾರಿ ವಾಹನದ ಕ್ಲಿನಿಕ್‍ನಲ್ಲಿ ಉಚಿತ ದಂತ ಮತ್ತು ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ದಂತ ವೈದ್ಯರಾದ ಡಾ. ಕೆ.ವಿ. ವೈಭವ್ ಹಾಗೂ ಡಾ. ಶಕೈನಾ ದಂತ ಸಮಸ್ಯೆಯ ರೋಗಿಗಳನ್ನು ಪರೀಕ್ಷಿಸಿದರು. ಕಣ್ಣಿನ ತಪಾಸಣೆಯನ್ನು ಡಾ. ನಂದೀಶ್ ಹಾಗೂ ಸಹಾಯಕ ಹರ್ಷ ಮಾಡಿದರು. ಶನಿವಾರಸಂತೆ ಮತ್ತು ಸುತ್ತಮುತ್ತಲಿನ ಗ್ರಾಮಗಳ 120 ಮಂದಿ ದಂತ ತಪಾಸಣೆ ಹಾಗೂ 150 ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.