ಸೋಮವಾರಪೇಟೆ, ಡಿ. 25 : ಕಳೆದ ತಾ. 4ರಂದು ಕೋವರ್ಕೊಲ್ಲಿ ಸಮೀಪದ ನಗರೂರು ಎಸ್ಟೇಟ್ನಲ್ಲಿ ವನ್ಯಪ್ರಾಣಿ ಧಾಳಿಯಿಂದ ಮೃತಪಟ್ಟ ತಿಮ್ಮಪ್ಪ ಎಂಬವರ ಕುಟುಂಬಕ್ಕೆ ಸರ್ಕಾರದಿಂದ ರೂ. 2ಲಕ್ಷ ಪರಿಹಾರ ಬಿಡುಗಡೆಯಾಗಿದ್ದು, ಉಪ ವಲಯ ಅರಣ್ಯಾಧಿಕಾರಿ ಮಾಧವ ನಾಯಕ್ ಅವರು ಆದೇಶ ಪ್ರತಿಯನ್ನು ಮೃತರ ಪತ್ನಿ ಗುಲಾಬಿ ಅವರಿಗೆ ವಿತರಿಸಿದರು. ಈ ಸಂದರ್ಭ ತಾ.ಪಂ. ಸದಸ್ಯ ಸತೀಶ್, ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ಸೇರಿದಂತೆ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಸೋಮಪ್ಪ ಸೇರಿದಂತೆ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ವನ್ಯಪ್ರಾಣಿ ಧಾಳಿಯಿಂದ ಸಾವನ್ನಪ್ಪಿದ್ದ ತಿಮ್ಮಪ್ಪ ಕುಟುಂಬಕ್ಕೆ ಪರಿಹಾರ ಕೋರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.