ಚೆಟ್ಟಳ್ಳಿ, ಡಿ. 25: ಚೆಟ್ಟಳ್ಳಿಯ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ತಾಲೂಕು ಪಂಚಾಯತ್ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ನೇತೃತ್ವದಲ್ಲಿ ರೈತ ದಿನಾಚರಣೆ ಆಚರಿಸಲಾಯಿತು.
ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿದ ಮುಳ್ಳಂಡ ಪಿ. ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎ. ಮಾಯಮ್ಮ, ಸಂಘದ ಸದಸ್ಯರಾದ ಬಲ್ಲಾರಂಡ ಮಣಿ ಉತ್ತಪ್ಪ, ಪುತ್ತರೀರ ಅಚ್ಚಯ್ಯ, ಪುತ್ತರೀರ ಸುಬ್ಬಯ್ಯ, ಪೇರಿಯನ ಉದಯಕುಮಾರ್ ಮತ್ತು ಸಂಘದ ಆಡಳಿತಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.