ನಾಪೆÇೀಕ್ಲು, ಡಿ. 25: ಕೊಳಕೇರಿ ತೊತ್ಯನಪರಿಕೆ ಅಂಗನವಾಡಿ ಕೇಂದ್ರದ ಒಳಗೆ ಕಾಳಿಂಗ ಸರ್ಪವೊಂದು ಸೇರಿಕೊಂಡಿದ್ದರಿಂದ ಮಕ್ಕಳು ಮತ್ತು ಸ್ಥಳೀಯರನ್ನು ಭಯಭೀತರನ್ನಾಗಿಸಿತು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸ್ಥಳೀಯರಾದ ಕುಂಡ್ಯೋಳಂಡ ವಿಶು ಪೂವಯ್ಯ, ಅಪ್ಪಚ್ಚಿರ ಬೋಪಣ್ಣ, ಉಸ್ಮಾನ್ ಸಾರ್ವಜನಿಕರ ಸಹಕಾರದೊಂದಿಗೆ ಹಾವನ್ನು ಚೀಲದೊಳಗೆ ಸೇರಿಸಿ ಅರಣ್ಯ ಇಲಾಖಾ ಸಿಬ್ಬಂದಿಗೆ ನೀಡುವದರ ಮೂಲಕ ಆತಂಕವನ್ನು ಪರಿಹರಿಸಿದರು.