ವೀರಾಜಪೇಟೆ, ಡಿ. 25: ಮಲೆತಿರಿಕೆಬೆಟ್ಟದ ಅಯ್ಯಪ್ಪ ದೇವಸ್ಥಾನದಲ್ಲಿ ತಾ. 26ರಂದು (ಇಂದು) ಅಪರಾಹ್ನ 3ಗಂಟೆಯಿಂದ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಂದ ಮಂಡಲಪೂಜೆ ನಡೆಯಲಿದೆ ಎಂದು ವ್ರತಧಾರಿಗಳಾದ ವಿನುಕುಮಾರ್, ಅನಿಲ್, ಸತೀಶ್, ಸಂಜು ಹರೀಶ್ ಹಾಗೂ ತಂಬುಅಯ್ಯಪ್ಪ ತಿಳಿಸಿದ್ದಾರೆ.

ಸಿದ್ದಾಪುರ

ಚೆನ್ನಯ್ಯನಕೋಟೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 33ನೇ ವರ್ಷದ ಮಂಡಲ ಪೂಜೆ ಹಾಗೂ ಅಯ್ಯಪ್ಪ ಬೆಳಕು ಕಾರ್ಯಕ್ರಮ ತಾ. 26 ರಂದು (ಇಂದು) ನಡೆಯಲಿದೆ.

26 ರಂದು ಬೆಳ್ಳಿಗೆ 6 ಗಂಟೆಗೆ ಮಹಾ ಗಣಪತಿ ಹೋಮ, 10 ಗಂಟೆಗೆ ಪಂಚಾಮೃತ ಅಭಿಷೇಕ, 12 ಕ್ಕೆ ಮಹಾ ಪೂಜೆ ಪ್ರಸಾದ ವಿನಿಯೋಗ, ಸಂಜೆ 4ಕ್ಕೆ ವಿಶೇಷ ಪೂಜೆಗಳು, ಸಂಜೆ 6ಕ್ಕೆ ಪಾಲಿಬೆಟ್ಟ ಶ್ರೀ ವಿಘ್ನೇಶ್ವರ ದೇವಾಲಯದಿಂದ ಕಲಾ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಚಂಡೆ ಮೇಳದೊಂದಿಗೆ ತೇರು ಮೆರವಣಿಗೆ, ರಾತ್ರಿ 10 ಗಂಟೆಗೆ ಅನ್ನಸಂತರ್ಪಣೆ, 10:30ಕ್ಕೆ ವಿಶೇಷ ಭಜನೆಗಳು ನಡೆಯಲಿದೆ.