ಕುಶಾಲನಗರ, ಡಿ. 25: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಸೋಮವಾರ ನೆಲ್ಲಿಹುದಿಕೇರಿ ಗ್ರಾಮದ ಸ್ಥಾನೀಯ ಸಮಿತಿ ಪ್ರಮುಖರು ಪಾಲ್ಗೊಂಡರು.

ಸ್ಥಾನೀಯ ಸಮಿತಿ ಅಧ್ಯಕ್ಷ ಭರತ್ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪ್ರಮುಖರು ಹಾಗೂ ತಾಲೂಕು ಹೋರಾಟ ಕೇಂದ್ರ ಸಮಿತಿ ಪದಾಧಿಕಾರಿಗಳು ಕಾವೇರಿ ತಾಲೂಕು ರಚಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸ್ಥಳೀಯ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಧರಣಿ ನಡೆಸಿದರು.

ಧರಣಿಯಲ್ಲಿ ಜಿಪಂ ಸದಸ್ಯೆ ಸುನಿತಾ, ತಾಪಂ ಸದಸ್ಯೆ ಸುಹಾದ ಅಶ್ರಫ್, ನೆಲ್ಲಿಹುದಿಕೇರಿ ಪಂಚಾಯ್ತಿ ಸದಸ್ಯರಾದ ಆಬಿದಾ ಜಲೀಲ್, ಧನಲಕ್ಷ್ಮಿ, ಪ್ರಮುಖರಾದ ಅಶ್ವಥ್, ಅಶ್ರಫ್, ಮೋಹನಪ್ಪ ಮತ್ತಿತರರು ಇದ್ದರು.