ಸಿದ್ದಾಪುರ, ಡಿ. 25: ಸಮೀಪದ ಬಾಡಗ ಗ್ರಾಮದ ಬದ್ರಿಯ ಜುಮಾ ಮಸೀದಿ ಆಡಳಿತ ಮಂಡಳಿ ವತಿಯಿಂದ ಇತ್ತೀಚೆಗೆ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಿ ಸಿ ಹಸೈನಾರ್ ಹಾಜಿ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಸಿ.ಎಂ ಮೊಹ್ದೀನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾರ್ಯದರ್ಶಿ ಅಬ್ದುಲ್ ನಿಸಾರ್, ಮಾಜಿ ಅಧ್ಯಕ್ಷ ಅಬೂಟ್ಟಿ, ಮಾಜಿ ಕಾರ್ಯಧರ್ಶಿ ಅಬೂಬಕರ್, ವಕ್ಷ್ ಬೋರ್ಡ್ ಸದಸ್ಯ ಸಯ್ಯದ್ ಬಾವ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದಾಲಿ, ಮಸೀದಿಯ ಖತೀಬ್ ಹಸೈನಾರ್, ಪ್ರಮುಖರಾದ ಬಾವ ಮಾಲ್ದಾರೆ ಸೇರಿದಂತೆ ಮತ್ತಿತರರು ಹಾಜರಿದ್ದರು.