ಗೋಣಿಕೊಪ್ಪ ವರದಿ, ಡಿ. 25: ಬೆಳ್ಳೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟೀಯ ಸೇವಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಪೊನ್ನಂಪೇಟೆ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಶ್ರೀ ಭೋದಸ್ವರೂಪಾನಂದ ಸ್ವಾಮೀಜಿ ಉದ್ಘಾಟಿಸಿದರು. ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಜಮಾಡ ಪಿ. ಕುಶಾಲಪ್ಪ, ಹುದಿಕೇರಿ ಗ್ರಾ. ಪಂ. ಅಧ್ಯಕ್ಷೆ ಮತ್ರಂಡ ರೇಖಾ ಮಾತನಾಡಿದರು. ಎನ್‍ಎಸ್‍ಎಸ್ ಶಿಬಿರದ ನಾಯಕ ವನಿತ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಎನ್.ಎಸ್.ಎಸ್. ಘಟಕದ ಚಿಂತನೆಗಳನ್ನು ತಿಳಿಸಿದರು. ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಗಣಪತಿ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಪಟ್ಟಡ ಪಿ. ಪೂವಣ್ಣ, ಯೋಜನಾಧಿಕಾರಿ ರೀಟಾ, ದುರ್ಗಪರಮೇಶ್ವರಿ ದೇವಸ್ಥಾನ ಅಧ್ಯಕ್ಷ ಕಾಳಿಮಾಡ ನರೇಂದ್ರ, ನಿವೃತ್ತ ಶಿಕ್ಷಕ ಇಟ್ಟೀರ ಮಂದಣ್ಣ, ಕಾಫಿ ಬೆಳೆಗಾರರುಗಳಾದ ಚಕ್ಕೇರ ಕಾಳಯ್ಯ, ನೂರೇರ ಬೊಳ್ಳಯ್ಯ, ಬೊಳ್ಳಿಮಾಡ ಧನು ದೇವಯ್ಯ, ಮುಖ್ಯ ಶಿಕ್ಷಕಿ ನೂರೇರ ಮಾಯಮ್ಮ ಉಪಸ್ಥಿತರಿದ್ದರು.