ಸೋಮವಾರಪೇಟೆ, ಡಿ. 25: ರಾಮನಗರ ಜಿಲ್ಲೆಯ

ಬಿಡದಿಯಲ್ಲಿ ನಡೆದ 52ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಿ.ಎಂ. ರಾಶಿ ಪ್ರಥಮ ಸ್ಥಾನ ಪಡೆದಿದ್ದಾಳೆ. 2 ಕಿ.ಮೀ. ಗುಡ್ಡಗಾಡು ಓಟವನ್ನು 6.52 ನಿಮಿಷಗಳಲ್ಲಿ ಪೂರೈಸಿ, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಭಾಜನಳಾಗಿದ್ದಾಳೆ. ಈಕೆ, ಕೂತಿ ಗ್ರಾಮದ ಸಿ.ಎನ್. ಮಂಜುನಾಥ್ ಮತ್ತು ರೀನಾ ದಂಪತಿ ಪುತ್ರಿ.