ಗುಡ್ಡೆಹೊಸೂರು, ಡಿ. 21: ಇಲ್ಲಿನ ಗೌಡ ಸಮಾಜದ ಮಹಾಸಭೆ ಸಮುದಾಯ ಭವನದಲ್ಲಿ ಸಮಾಜದ ಆಧ್ಯಕ್ಷ ಕೋಡಿ ರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಂಘದ ಸದಸ್ಯ ಪುದಿಯನೆರವನ ಮಹೇಶ್ ಉಪಸ್ಥಿತರಿದ್ದರು. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಆಗಿ ಕಾರ್ಯನಿರ್ವಯಿಸುತ್ತಿರುವ ಅವರನ್ನು ಸಮಾಜದ ವತಿಯಿಂದ ಈ ಸಂದರ್ಭ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೋಡಿ ರಾಮಮೂರ್ತಿ ಗೌಡ ಜನಾಂಗದ ಆಚಾರ, ಸಂಸ್ಕøತಿ, ಭಾಷೆ, ಉಡುಗೆ, ತೊಡುಗೆ, ಪರಂಪರೆ ಬಗ್ಗೆ ತಿಳಿಸಿದರು. ಸಂಘದ ಮತ್ತೊಬ್ಬ ಸದಸ್ಯರಾದ ಬಿ.ಬಿ. ಭಾರತೀಶ್ ಮಾತನಾಡಿ, ನಮ್ಮ ಜನಾಂಗದ ಮೇಲೆ ಪ್ರೀತಿ ಇರಲಿ ಅಭಿಮಾನವಿರಲಿ. ಜೊತೆಯಲ್ಲಿ ಮತ್ತೊಂದು ಜನಾಂಗದ ಮೇಲೆಯೂ ಗೌರವವಿರಲಿ ಎಂದರು.
ಸದಸ್ಯರಾದ ಗುಡ್ಡೆಮನೆ ಮಣಿಕುಮಾರ್ ಮಾತನಾಡಿ, ಅರೆಭಾಷೆ ಗೌಡ ಜನಾಂಗದವರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬಂದು ಜನಾಂಗದ ಗೌರವವನ್ನು ಎತ್ತಿಹಿಡಿಯುವಂತೆ ಸಲಹೆಯಿತ್ತರು. ಈ ಸಂದರ್ಭ ವೇದಿಕೆಯಲ್ಲಿ ಉಪಾಧ್ಯಕ್ಷ ಪಳಂಗಾಯ ಎಲ್ಲಿಯಣ್ಣ, ಕಾರ್ಯದರ್ಶಿ ನಡುಗಲ್ಲು ಬಾಲಕೃಷ್ಣ, ಕುಡೆಕಲ್ಲು ಗುರುಪ್ರಸಾದ್, ಗುಡ್ಡೆಮನೆ ರವಿಕುಮಾರ್, ಕುಡೆಕಲ್ಲು ಗಣೇಶ್, ಪುದಿಯನೆರವನ ಪದ್ಮಾವತಿ, ಅಚ್ಚಾಂಡಿರ ತಾರ ಹೇಮರಾಜ್, ಬೊಮ್ಮುಡಿ ಬಾಲಕೃಷ್ಣ ಮತ್ತು ಸಮಾಜದ ಸಲಹಾ ಸಮಿತಿ ಸದಸ್ಯರಾದ ಬಿರುಮಣ್ಣನ ಸಣ್ಣಯ್ಯ, ಕನ್ನಯ್ಯನ ಬಾಲಕೃಷ್ಣ, ಕೋಡಿ ಪೂವಯ್ಯ, ಬೆದರಂಗಾಲ ಭಾರತೀಶ್, ಜಿ.ಎಂ. ಮಣಿಕುಮಾರ್, ಅಚ್ಚಾಂಡಿರಾ ಹೇಮರಾಜ್ ಇತರರು ಉಪಸ್ಥಿತರಿದ್ದರು.
ಕುಡೆಕಲ್ಲು ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಬಾರಿಯಂಡ ಪೂಜಾಶ್ರೀ ಪ್ರಾರ್ಥಿಸಿದರು. ಕಾರ್ಯದರ್ಶಿ ನಡುಗಲ್ಲು ಬಾಲಕೃಷ್ಣ ವಾರ್ಷಿಕ ವರದಿ ಮಂಡಿಸಿದರು. ಗುಡ್ಡೆಮನೆ ರವಿಕುಮಾರ್ ವಂದಿಸಿದರು. ಈ ಸಂದರ್ಭ ಸಂಘದ ಸದಸ್ಯೆ ಆರೋಗ್ಯ ಇಲಾಖಾಧಿಕಾರಿ ಆಮೆಮನೆ ಪಾರ್ವತಿ ಯೋಗದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸಂಘದ ಪ್ರತಿಭಾವಂತ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ನಡೆಯಿತು.
ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕಪಡೆದ ಡಿಂಪಲ್ ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಪಡೆದ ಲಿಖಿತ್, ಸಂಗೀತ ಕ್ಷೇತ್ರದಲ್ಲಿ ಚಪ್ಪೇರಾ ಮೌಲ್ಯ ಮತ್ತು ಜಯಶ್ರೀ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟದ ಕಬಡ್ಡಿಪಟು, ತವನ್ ಅವರು ಸನ್ಮಾನ ಸ್ವೀಕರಿಸಿದರು.