ಸಿದ್ದಾಪುರ, ಡಿ. 21: ಮಾಲ್ದಾರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಅರಣ್ಯ ಇಲಾಖಾ ವತಿಯಿಂದ ಅಡುಗೆ ಅನಿಲ ಸಂಪರ್ಕವನ್ನು ವಿತರಿಸಲಾಯಿತ್ತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಾಣಿ, ತಾ.ಪಂ. ಸದಸ್ಯೆ ಚಿನ್ನಮ್ಮ, ಗ್ರಾ.ಪಂ. ಸದಸ್ಯರುಗಳು ಪಿ.ಡಿ.ಓ. ರಾಜೇಶ್, ಹಾಗೂ ಅರಣ್ಯ ಅಧಿಕಾರಿಗಳು ಹಾಜರಿದ್ದರು.