ಶನಿವಾರಸಂತೆ, ಡಿ. 21: ಸಾವು-ನೋವಿನಲ್ಲಿ ಮೊದಲ ಕಾರಣ ಹೃದಯ ಸಂಬಂಧಿ ಕಾಯಿಲೆ ಎಂದು ಹೃದಯ ರೋಗ ತಜ್ಞ ಡಾ. ಚಿನ್ನ ನಾಗಪ್ಪ ಹೇಳಿದರು. ರೋಟರಿ ಕ್ಲಬ್ ಹಾಗೂ ಹಾಸನ ಜನಪ್ರಿಯ ಇಂಡಿಯನ್ ಹಾರ್ಟ್ ಲೈಫ್ ಲೈನ್ ಆಸ್ಪತ್ರೆ ಸಹಭಾಗಿತ್ವದಲ್ಲಿ ನಡೆದ ಉಚಿತ ಹೃದ್ರೋಗ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೃದಯ ಸಂಬಂಧಿ ರೋಗವನ್ನು ಶೇ. 80 ರಷ್ಟು ತಡೆಗಟ್ಟಬಹುದು. ನಿಗಾವಹಿಸಿ ಪರೀಕ್ಷಾ ವಿಧಾನದ ಮೂಲಕ ಪತ್ತೆಹಚ್ಚಿ ತಡೆಗಟ್ಟಬಹುದು ಎಂದು ಹೇಳಿದರು.

ಡಾ. ಉದಯ್ ಕುಮಾರ್ ಮಾತನಾಡಿ, ಬಡವರ್ಗದವರ ಸದುಪಯೋಗಕ್ಕಾಗಿ ಉಚಿತ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿದರು.