ಕುಶಾಲನಗರ, ಡಿ. 19: ಪರಿಶಿಷ್ಟ ಜಾತಿ ಮತ್ತು ಪಂಡಗದ ನಿವೃತ್ತ ಸರಕಾರಿ ನೌಕರರ ಸಂಘದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಲಾಯಿತು. ಪಟ್ಟಣದ ಟೌನ್ ಕಾಲೋನಿಯಲ್ಲಿ ಆರಂಭಿಸಲಾದ ಕಚೇರಿಯನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಪ್ಪ ಉದ್ಘಾಟಿಸಿದರು. ಬಳಿಕ ಕಚೇರಿಯಲ್ಲಿ ಅಳವಡಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಡಿ.ಅಣ್ಣಯ್ಯ, ಗೌರವ ಕಾರ್ಯದರ್ಶಿ ರಾಮಯ್ಯ, ಕಾರ್ಯದರ್ಶಿ ಸೋಮಣ್ಣ, ಖಜಾಂಚಿ ನಿಂಗರಾಜು, ಸದಸ್ಯರಾದ ಮಲ್ಲಪ್ಪ, ಎ.ಎಸ್. ಜಯಪ್ಪ, ಬೇಲಯ್ಯ, ರಾಜಪ್ಪ ಇದ್ದರು.