ಗೋಣಿಕೊಪ್ಪ ವರದಿ, ಡಿ. 19: ಇಲ್ಲಿನ ಕಾವೇರಿ ಕಾಲೇಜು ಭೋದಕೇತರ ಸಿಬ್ಬಂದಿ ಆಲ್ವಿನ್ ಸೀಕ್ವೇರಾ, ಸೋಮನಾಥ್ ಧೂಳೆ ಹಾಗೂ ಕಾವೇರಿ ಇವರುಗಳು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಆಡಳಿತಾತ್ಮಕ ಸಿಬ್ಬಂದಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಆದಾಯ ತೆರಿಗೆ ವಿಷಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.