ಕುಶಾಲನಗರ, ಡಿ. 19: ಕುಶಾಲನಗರ ಸಮೀಪ ಮಾದಾಪಟ್ಟಣ ಗ್ರಾಮದ ಅಂದ ಕುಟುಂಬ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮ ಸ್ಥಳದ ವತಿ ಯಿಂದ ಮಾಸಾ ಶನ ವಿತರಣೆ ನಡೆಯಿತು. ಮಾದಾಪಟ್ಟಣದ ನಿವಾಸಿ ಮದುರಯ್ಯ ಕೂಲಿ ಕಾರ್ಮಿಕರಾಗಿದ್ದು ಅವರ ಕುಟುಂಬದಲ್ಲಿ ಪತ್ನಿ, ಪುತ್ರ ಮತ್ತು ಪುತ್ರಿ ಸೇರಿದಂತೆ ಮೂರು ಮಂದಿ ದೃಷ್ಟಿ ಹೀನರಾಗಿದ್ದು ಕ್ಷೇತ್ರದ ವತಿಯಿಂದ ಪ್ರತಿ ತಿಂಗಳು ತಲಾ ರೂ. 750 ನೀಡಲು ನಿರ್ಧರಿಸಿರುವದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕುಶಾಲನಗರ ವಲಯ ಮೇಲ್ವಿಚಾರಕ ಕೆ. ಹರೀಶ್ ತಿಳಿಸಿದ್ದಾರೆ.

ಇತ್ತೀಚೆಗೆ ಮದುರಯ್ಯ ಅವರಿಗೆ ಮಾಸಾಶನ ವಿತರಿಸಲಾಯಿತು. ಈ ಸಂದರ್ಭ ಸ್ಥಳೀಯ ಸೇವಾ ಪ್ರತಿನಿಧಿ ಚಂದ್ರಾವತಿ, ಒಕ್ಕೂಟದ ಉಪಾಧ್ಯಕ್ಷೆ ರುಕ್ಮಿಣಿ, ಕಾರ್ಯದರ್ಶಿ ಸೌಮ್ಯ ಇದ್ದರು.