ವೀರಾಜಪೇಟೆ, ಡಿ. 20 : ಕೂಲಿ ಕಾರ್ಮೀಕಳಾಗಿದ್ದ ಮಹಿಳೆಯೊರ್ವರು ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ತೊಡು ಬೈಗೋಡು ಗ್ರಾಮದಲ್ಲಿ ನಡೆದಿದೆ.ವೀರಾಜಪೇಟೆ ತಾಲೂಕಿನ ಕೊಳ್ತೊಡು ಬೈಗೋಡು ಗ್ರಾಮದ ನಿವಾಸಿಯಾದ ಉತ್ತಪ್ಪ ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ನಗರದ ನಿವಾಸಿ ರೇಭಾ ಅಧಿಕಾರ್ (40) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. 5 ವರ್ಷಗಳಿಂದ ತೋಟದ ಲೈನ್ ಮನೆಯಲ್ಲಿ ವಾಸವಿದ್ದು, ಮೂವರು ಮಕ್ಕಳ ತಾಯಿಯಾದ ಈಕೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.
ಮೃತಳ ಪತಿ ಪತ್ನಿ ಮತ್ತು ಮಕ್ಕಳನ್ನು ತ್ಯಜಿಸಿ ಹೊರ ನಡೆದಿದ್ದನು. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ತೋಟಕ್ಕೆ ಬಳಸುತ್ತಿದ್ದ ವಿಷ ದ್ರಾವಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಮೃತಳ ಸಂಬಂಧಿಕÀ ಶೆಸೂನ್ ಸರ್‍ಕಾರ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.