ಶ್ರೀಮಂಗಲ, ಡಿ. 20: ತಾ. 24 ಹಾಗೂ 25 ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುಕೊ ಕೊಡವ ಮಂದ್ ನಮ್ಮೆಯ ವಿವಿದ ಸಾಂಸ್ಕøತಿಕ ಮತ್ತು ಜಾನಪದ ಕಲೆ ಪೈಪೋಟಿಗಳ ವಿಜೇತರಿಗೆ ದಿ.ಕೇಚಮಾಡ ತಿಮ್ಮಯ್ಯ-ಮುತ್ತಮ್ಮ ಜ್ಞಾಪಕಾರ್ಥ ಪಾರಿತೋಷಕಗಳನ್ನು ನೀಡಲಾಗುವದೆಂದು ಎಂದು ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜು ಚಿಣ್ಣಪ್ಪ, ಕುಟ್ಟ ಸಮೀಪ ಪೇರ್‍ಮಾಡ್‍ನ ಬೆಳೆಗಾರರಾದ ಕೇಚಾಮಾಡ ಗಣೇಶ್ ಸೋಮಯ್ಯ ದಂಪತಿ, ಈ ವರ್ಷದ ‘ಯುಕೊ ಕೊಡವ ಮಂದ್ ನಮ್ಮೆಯ ವಿವಿದ ಸ್ಪಧೆರ್Éಗಳ ವಿಜೇತರಿಗೆ ನೀಡಲು ತಮ್ಮ ತಂದೆ ತಾಯಿಯವರಾದ ದಿವಂಗತ ಕೇಚಮಾಡ ತಿಮ್ಮಯ್ಯ ಮತ್ತು ತಾಯಿ ಮುತ್ತಮ್ಮ ಅವರ ಜ್ಞಾಪಕಾರ್ಥ ಸುಮಾರು 70 ಸಾವಿರ ರೂಪಾಯಿಗಳ ಮೌಲ್ಯದ ಪಾರಿತೋಷಕಗಳನ್ನು ಉದಾರವಾಗಿ ನೀಡಿರುವದಾಗಿ ತಿಳಿಸಿದರು.
ಇದೇ ತಾ.24 ರಂದು ಎರಡು ದಿನಗಳ ಮಂದ್ ನಮ್ಮೆಗೆ ಚಾಲನೆ ದೊರೆಯಲಿದ್ದು, ಮೊದಲ ದಿನ ಕಾವೇರಿ ಕಾಲೇಜು ಮೈದಾನದಲ್ಲಿ ಸಾಂಪ್ರದಾಯಿಕ ಮಂದ್‍ನ ಚಟುವಟಿಕೆಗಳಾದ ತೆಂಗೆ ಬೊಡಿ, ತೆಂಗೆ ಕನಿ, ಬಾಳೋಪಾಟ್, ಮಕ್ಕಳ ಕಪ್ಪೆಯಾಟ್, ಹಾಗೂ ವಾಲಗತಾಟ್ ಪೈಪೋಟಿ ನಡೆಯಲಿದೆ. ಹಲವಾರು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ ಮಂಜು ಚಿಣ್ಣಪ್ಪ ಇದೇ ಮೊದಲ ಬಾರಿಗೆ ಆಯೋಜಿಸಿರುವ ತೆಂಗೆಬೊಡಿ ಹಾಗೂ ತೆಂಗೆ ಕನಿ ಪೈಪೋಟಿಗೆ ಉತ್ತಮ ಸ್ಪಂಧÀನೆ ದೊರೆತಿರುವದಾಗಿ ಮಾಹಿತಿ ನೀಡಿದರು.
ತಾ.25 ರಂದು ಗೋಣಿಕೊಪ್ಪಲಿನ ಮೈಸೂರು ರಸ್ತೆಯ ಎಪಿಎಂಸಿ ಬಳಿಯಿಂದ ಬೃಹತ್ ಸಾಂಸ್ಕøತಿಕ ಮೆರವಣಿಗೆಯ ಮೂಲಕ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನಕ್ಕೆ ತೆರಳಿ ಸಮಾವೇಶ ನಡೆಯಲಿದು,್ದ ಕೊಡಗಿನ ಮೂಲೆ ಮೂಲೆಗಳಿಂದ ಸಾಂಪ್ರದಾಯಿಕ ಉಡುಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಮಂಜು ಚಿಣ್ಣಪ್ಪ ತಿಳಿಸಿದರು.
ಕೊಡವ ಸಂಸ್ಕøತಿಯನ್ನು ಉಳಿಸಿ ಪೋಷಿಸುವ ಸ್ಪಷ್ಟ ಉದ್ದೇಶದೊಂದಿಗೆ, ಕೊಡವ ಸಂಸ್ಕøತಿಕ ವೈವಿದ್ಯತೆಯನ್ನು ಪರಸ್ಪರ ಹಂಚಿಕೊಳ್ಳುವ, ಹಾಗೂ ಯುವ ಪೀಳಿಗೆಗೆ ಕೊಡವ ಸಂಸ್ಕøತಿಯನ್ನು ಪರಿಚಯಿಸಿ ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸುವ ಮಹತ್ತರ ಜವಾಬ್ದಾರಿಯನ್ನು ಅರಿತು ಈ ಮಂದ್ ನಮ್ಮೆಯನ್ನು ಪ್ರಾರಂಭಿಸಲಾಗಿದೆ. ಈ ಕೊಡವ ಮಂದ್ ನಮ್ಮೆಯಿಂದ ಕೊಡವ ಸಂಸ್ಕøತಿಯ ಮೇಲೆ ಅತ್ಯಂತ ಯಶಸ್ವೀ ಪರಿಣಾಮ ಬೀರಿದ್ದು, ವಿಶೇಷವಾಗಿ ಮಂದ್‍ನ ವಿಷಯದಲ್ಲಿ ಪರಿವರ್ತನೆಯ ಪರ್ವ ಆರಂಭವಾಗಿದೆ, ಕಳೆದ ಮೂರು ವರ್ಷಗಳ ಅವದಿಯಲ್ಲಿ ದಶಕಗಳಿಂದ ಮುಚ್ಚಿಹೋಗಿದ್ದ ಅನೇಕ ಸಾಂಪ್ರದಾಯಿಕ ಮಂದ್‍ಗಳು ಮರುಚಟುವಟಿಕೆಗಳನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಪೂರ್ವಜರ ದೂರ ದೃಷ್ಟಿತ್ವದ ಫಲವಾಗಿ ರೂಪುಗೊಂಡ ಸಂಸ್ಕøತಿಯನ್ನು ಉಳಿಸಿ ಪೋಷಿಸುವ ಕಾರ್ಯಕ್ಕೆ ತಮ್ಮ ಅಳಿಲು ಸೇವೆಯನ್ನು ನೀಡುವ ದೃಷ್ಠಿಯಿಂದ ಯುಕೊ ಕೊಡವ ಮಂದ್ ನಮ್ಮೆಯಲ್ಲಿ ನಡೆಯುವ ವಿವಿಧ ಸಾಂಸ್ಕøತಿಕ ಪೈಪೋಟಿಯಲ್ಲಿನ ವಿಜೇತರಿಗೆ ಪಾರಿತೋಷಕವನ್ನು ಕೊಡುಗೆಯಾಗಿ ನೀಡಿರುವದಾಗಿ ದಾನಿಗಳಾದ ಕೇಚಾಮಾಡ ಗಣೇಶ್ ಸೋಮಯ್ಯ ತಿಳಿಸಿದರು. ಈ ನಿಟ್ಟಿನಲ್ಲಿ ಯುಕೊ ಕೊಡವ ಮಂದ್ ನಮ್ಮೆಯು ಒಂದು ಉತ್ತಮ ಬೆಳವಣಿಗೆ ಯಾಗಿದ್ದು ಇದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪಾರಿತೋಷಕಗಳನ್ನು ನೀಡಿರುವದಾಗಿ ಕೇಚಮಾಡ ಗಣೇಶ್ ಸೋಮಯ್ಯ ತಿಳಿಸಿದರು.
ಈ ಸಂದರ್ಭ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಮಲ್ಲಮಾಡ ದೇವಯ್ಯ, ಉಳುವಂಗಡ ಲೋಹಿತ್ ಭೀಮಯ್ಯ, ಗುಡಿಯಂಗಡ ಲಿಖಿನ್ ಬೋಪಣ್ಣ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ ಹಾಗೂ ಪುಟ್ಟಂಗಡ ಉತ್ತಪ್ಪ ಮುಂತಾದವರು ಉಪಸ್ಥಿತರಿದ್ದರು.