ಮಡಿಕೇರಿ, ಡಿ. 20: ರೋಟರಿ ಮಿಸ್ಟಿ ಹಿಲ್ಸ್ ಪ್ರಾಯೋಜಿತ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಕಾರ್ಯಾರಂಭಿಸಲಿರುವ ರೋಟರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆಯಾಗಿ ನಮೃತಾ ವರ್ಣೇಕರ್ ಮತ್ತು ಕಾರ್ಯದರ್ಶಿಯಾಗಿ ಕೆ.ಎಸ್.ರಚನಾ ಆಯ್ಕೆಯಾಗಿದ್ದಾರೆ.2017-18 ನೇ ಸಾಲಿನ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ತೃತೀಯ ಬಿ.ಕಾಮ್ ವಿದ್ಯಾರ್ಥಿನಿ ನಮೃತಾ ಪಿ. ವರ್ಣೇಕರ್, ಕಾರ್ಯದರ್ಶಿಯಾಗಿ ತೃತೀಯ ಬಿ.ಕಾಮ್ ನ ರಚನಾ ಕೆ.ಎಸ್. ಉಪಾಧ್ಯಕ್ಷೆಯಾಗಿ ಲಿಪಿಶ್ರೀ ಡಿ.ಜೆ. ಆಯ್ಕೆಯಾಗಿದ್ದಾರೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಟರ್ಯಾಕ್ಟ್ ಕ್ಲಬ್ ನ ಜಂಟಿ ಕಾರ್ಯದರ್ಶಿಯಾಗಿ ಸಲೀಖಾ ಜೋಹ್ರಾ, ಸಾರ್ಜೇಂಟ್ ಎಟ್ ಆಮ್ರ್ಸ್ ಆಗಿ ಕೆ.ಎ.ಆಲೆನ್ , ಖಜಾಂಚಿಯಾಗಿ ಪಿ.ಸಿ.ಜಿಷ್ಮಾ ರೆಜಿಮಾ , ಪದಾಧಿಕಾರಿಗಳಾಗಿ ಕರಣ್ ಕಾರ್ಯಪ್ಪ, ತಫ್ರಿನಾ ಎಂ.ಎ., ಜಾನ್ಸನ್, ಎಂ.ಜೆಡ್. ಅಬ್ರಾಜ್ ಆಯ್ಕೆಯಾಗಿದ್ದಾರೆ. ಕಾಲೇಜಿನ 60 ವಿದ್ಯಾರ್ಥಿಗಳು ರೋಟರ್ಯಾಕ್ಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ತಾ.21 ರಂದು (ಇಂದು) ಮಧ್ಯಾಹ್ನ 2.30 ಗಂಟೆಗೆ ಕಾರ್ಯಪ್ಪ ಕಾಲೇಜಿನಲ್ಲಿ ಜರುಗಲಿದೆ. ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ ನೆರವೇರಿಸಲಿದ್ದು, ಕಾಲೇಜಿನ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ.ಸಂದೀಪ್, ಜೋನಲ್ ಲೆಫ್ಟಿನೆಂಟ್ ಎ.ಕೆ.ವಿನೋದ್, ಮಿಸ್ಟಿ ಹಿಲ್ಸ್ ನ ರೋಟರ್ಯಾಕ್ಟ್ ಸಮಿತಿ ಅಧ್ಯಕ್ಷ ಎಂ.ಧನಂಜಯ್, ಕಾರ್ಯಪ್ಪ ಕಾಲೇಜಿನ ರೋಟರ್ಯಾಕ್ಟ್ ಸಂಯೋಜಕ ಡಾ.ಶ್ರೀಧರ ಹೆಗ್ಡೆ, ನಿರ್ಗಮಿತ ಅಧ್ಯಕ್ಷ ಕೌಸರ್, ನಿರ್ಗಮಿತ ಕಾರ್ಯದರ್ಶಿ ಎಂ. ಮದನ್ ಗೋಪಾಲ್ ಪಾಲ್ಗೊಳ್ಳಲಿದ್ದಾರೆ ಎಂದು ಅನಿಲ್ ಎಚ್.ಟಿ. ತಿಳಿಸಿದ್ದಾರೆ.