ಮಡಿಕೇರಿ, ಡಿ. 20: ಇಲ್ಲಿನ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಗೃಹರಕ್ಷಕ ದಳ ಕ್ರೀಡಾಕೂಟದ ಸಮಾರೋಪ ಸಮಾರಂಭವು ತಾ. 17 ರಂದು ಜರುಗಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‍ಕುಮಾರ್, ಗೃಹರಕ್ಷಕ ದಳ ಕಮಾಂಡೆಂಟ್ ಹಾಗೂ ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ವೇಳೆ ಮಡಿಕೇರಿ ತಂಡ ಪ್ರಥಮ ಹಾಗೂ ವೀರಾಜಪೇಟೆ ತಂಡ ದ್ವಿತೀಯ ಬಹುಮಾನ ಗಳಿಸಿತು. 400x100ರ ರಿಲೇ ಮಹಿಳಾ ವಿಭಾಗದಲ್ಲಿ ಚಂದ್ರಿಕಾ ತಂಡ ಪ್ರಥಮ ಹಾಗೂ ನಸಿಮಾ ತಂಡ ದ್ವಿತೀಯ ಬಹುಮಾನ ಪಡೆದರು.

100 ಮೀ. ಓಟದಲ್ಲಿ ಕೆ.ಎಂ. ಪವಿ ಪ್ರಥಮ, ಡಾಲು ದ್ವಿತೀಯ, 800 ಮೀ. ಓಟದಲ್ಲಿ ಕೆ.ಪಿ. ಧನುಷ್ ಪ್ರಥಮ, ಡಿ.ಆರ್. ಭರತೇಶ್ ದ್ವಿತೀಯ ಸ್ಥಾನ ಗಳಿಸಿದರು. ಎತ್ತರ ಜಿಗಿತದಲ್ಲಿ ಜಿ.ವಿ. ಗಣೇಶ ಪ್ರಥಮ, ಕವನ್ ಕುಮಾರ್ ದ್ವಿತೀಯ ಬಹುಮಾನ ಪಡೆದರು. ಉದ್ದ ಜಿಗಿತದಲ್ಲಿ ಜಿ.ವಿ. ಗಣೇಶ ಪ್ರಥಮ, ಕೆ.ಪಿ. ಧನುಷ್ ದ್ವಿತೀಯ ಸ್ಥಾನ ಪಡೆದರೆ, ಭಾರದ ಗುಂಡು ಎಸೆತದಲ್ಲಿ ರಕ್ಷಿತ್ ಪ್ರಥಮ, ಪುನಿತ್ ದ್ವಿತೀಯ ಸ್ಥಾನಗಳಿಸಿದರು.

ವಾಲಿಬಾಲ್‍ನಲ್ಲಿ ಕೆ.ಪಿ. ಧನುಷ್ ತಂಡ ಪ್ರಥಮ, ಪಿ.ಎನ್. ಷಣ್ಮುಗ ತಂಡ ದ್ವಿತೀಯ ಸ್ಥಾನ ಗಳಿಸಿದರು. ಕಬಡ್ಡಿಯಲ್ಲಿ ಧನುಷ್ ತಂಡ ಮೊದಲು ಮತ್ತು ಕೆ.ಯು. ಮುತ್ತಣ್ಣ ತಂಡ ಎರಡನೇ ಬಹುಮಾನಗಳಿಸಿದರು.

ಕ್ರೀಡಾ ವಿಜೇತರಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಗೀತಾ ಹಾಗೂ ಸೌಮ್ಯ ಕಾರ್ಯಕ್ರಮ ನಿರೂಪಿಸಿದರೆ, ಕ್ರೀಡಾಕೂಟ ತೀರ್ಪುಗಾರರಾಗಿ ಕೃಷ್ಣ ಹಾಗೂ ನಾಗರಾಜ್ ಕಾರ್ಯನಿರ್ವಹಿಸಿದರು.