ಹೆಬ್ಬಾಲೆ, ಡಿ. 19: ಸಮೀಪದ ನಂಜರಾಯಪಟ್ಟಣ ಗ್ರಾಮದಲ್ಲಿ ಶ್ರೀ ನಂಜುಂಡೇಶ್ವರ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಪ್ರದೀಪ್ ಫ್ರೆಂಡ್ಸ್ ಕಬಡ್ಡಿ ತಂಡ ಜಯಗಳಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ನಂಜರಾಯಪಟ್ಟಣ ಪ್ರೌಢಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಪ್ರದೀಪ್ ಫ್ರೆಂಡ್ಸ್ ತಂಡ ನಂಜರಾಯಪಟ್ಟಣ ಎನ್.ವೈ.ಸಿ ತಂಡವನ್ನು ಸೋಲಿಸಿ ಪ್ರಥಮ ಸ್ಥಾನಗಳಿಸಿತು. ನಂಜರಾಯಪಟ್ಟಣ ಎನ್.ವೈ.ಸಿ. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮದಲಾಪುರÀ ಬ್ಯಾಡಗೊಟ್ಟ ತಂಡ ತೃತೀಯ ಸ್ಥಾನ ಹಾಗೂ ದೇವರಕೊಲ್ಲಿ ಎನ್.ವೈ.ಸಿ. ತಂಡ ನಾಲ್ಕನೇ ಬಹುಮಾನಗಳಿಸಿತು.
ನಂತರ ನಡೆದ ಸಮಾರಂಭದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಪ್ರಥಮ ಸ್ಥಾನಗಳಿಸಿದ ಪ್ರದೀಪ್ ಫ್ರೆಂಡ್ಸ್ ತಂಡಕ್ಕೆ ರೂ. 10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನಗಳಿಸಿದ ನಂಜರಾಯಪಟ್ಟಣ ಎನ್. ವೈ.ಸಿ. ತಂಡಕ್ಕೆ ರೂ. 7 ಸಾವಿರ ನಗದು ಮತ್ತು ಟ್ರೋಫಿಯನ್ನು ವಿತರಿಸಿದರು.
ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ.ಮಹೇಶ್, ಮೂರನೇ ಸ್ಥಾನ ಪಡೆದ ಬ್ಯಾಡಗೊಟ್ಟ ತಂಡಕ್ಕೆ ರೂ. 3 ನಗದು ಹಾಗೂ ನಾಲ್ಕನೇ ಸ್ಥಾನ ಗಳಿಸಿದ ದೇವರಕೊಲ್ಲಿ ತಂಡಕ್ಕೆ ರೂ.2 ಸಾವಿರ ನಗದು ಹಾಗೂ ಟ್ರೋಫಿಯನ್ನು ವಿತರಿಸಿದರು. ಉತ್ತಮ ಧಾಳಿಕಾರರಾಗಿ ಅನೀಸ್, ಉತ್ತಮ ಹಿಡಿತಗಾರನಾಗಿ ಸಂತೋಷ್, ಸರಣಿ ಆಟಗಾರರಾಗಿ ಆಶೀಫ್ ವೈಯಕ್ತಿಕ ಬಹುಮಾನಗಳಿಸಿದರು.
ನಂಜುಂಡೇಶ್ವರ ಯುವಕ ಸಂಘದ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ವಿಜು, ಗ್ರಾ.ಪಂ. ಅಧ್ಯಕ್ಷೆ ಜೈನಬ, ಮಾಜಿ ಉಪಾಧ್ಯಕ್ಷ ಪ್ರೇಮಾನಂದ, ಸದಸ್ಯರಾದ ತಮ್ಮಯ್ಯ, ಚಂದ್ರಾವತಿ, ಸಂಘದ ಕಾರ್ಯದರ್ಶಿ ಪಂಚಾಕ್ಷರಿ ಉಪಸ್ಥಿತರಿದ್ದರು.