ಗೋಣಿಕೊಪ್ಪಲು, ಡಿ. 19: ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕಂಬೈನ್ಡ್ ವಾರ್ಷಿಕ ತರಬೇತಿ ಶಿಬಿರವನ್ನು ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.10 ದಿನಗಳವರೆಗೆ ನಡೆದ ಈ ಶಿಬಿರದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಬಿ.ಟಿ. ಕ್ಷೀರ, ಕೆ. ಅನುವರ್ಣ, ಹೆಚ್.ಜೆ. ರಮ್ಯ ಹಾಗೂ ಪರ್ವತ್ ಪೊನ್ನಮ್ಮ ಇವರುಗಳು ಭಾಗವಹಿಸಿದ್ದರು. ಶಿಬಿರದಲ್ಲಿ ನಡೆಸಿದ ಸಾಂಸ್ಕøತಿಕ ಸ್ಪರ್ಧೆಗಳಾದ ಹಾಡುಗಾರಿಕೆ ಮತ್ತು ನೃತ್ಯಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.