ಮಡಿಕೇರಿ, ಡಿ. 19: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಹೆಚ್.ಎಂ) ದಡಿಯಲ್ಲಿ ನವೆಂಬರ್ 28 ಮತ್ತು 29 ರಂದು ನೇರ ಸಂದರ್ಶನದಲ್ಲಿ ಮಕ್ಕಳ ಸಮಾಲೋಚಕರು, ಶುಶ್ರೂಷಕಿಯರು, ನೇತ್ರ ಸಹಾಯಕರು, ಆರ್.ಬಿ.ಎಸ್.ಕೆ. ಆಯುಷ್ ವೈದ್ಯರು, ಪ್ರಯೋಗ ಶಾಲಾ ತಂತ್ರಜ್ಞರು, ಪ್ರಯೋಗ ಶಾಲಾ ಮೇಲ್ವಿಚಾರಕರು ಮತ್ತು ಔಷಧಿ ವಿತರಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಆಯ್ಕೆ ಪಟ್ಟಿಯಲ್ಲಿನ ಯಾವದೇ ಆಕ್ಷೇಪಣೆಗಳನ್ನು ಸಲ್ಲಿಸಲು ತಾ. 23 ರ ಸಂಜೆ 5 ಗಂಟೆಯವರೆಗೆ ಅವಕಾಶವಿದ್ದು, ಈ ಸಮಯದಲ್ಲಿ ಆಕ್ಷೇಪಣೆಗಳೇನಾದರೂ ಇದ್ದರೆ ಸಲ್ಲಿಸಬಬಹುದಾಗಿದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.