ಚೆಟ್ಟಳ್ಳಿ, ಡಿ. 19: ಚೆಟ್ಟಳ್ಳಿ ಪ್ರೌಢಶಾಲಾ ವಾರ್ಷಿಕೋತ್ಸವ ತಾ. 22 ರಂದು ನಡೆಯಲಿದೆ. ಪೂವಾಹ್ನ 9.30ಕ್ಕೆ ಮಡಿಕೇರಿ ತಾಲೂಕು ಪಂಚಾಯಿತಿ ಪ್ರಬಾರ ಕಾರ್ಯನಿರ್ವಹಣಾಧಿಕಾರಿ ತೇಲಪಂಡ ಜೀವನ್ ಕುಮಾರ್ ನಾಣಯ್ಯ ಧ್ವಜಾರೋಹಣ ಮತ್ತು ಕ್ರೀಡಾಜ್ಯೋತಿ ಬೆಳಗಲಿದ್ದಾರೆ.

ಅಪರಾಹ್ನ 2 ಗಂಟೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಅಧ್ಯಕ್ಷತೆಯಲ್ಲಿ ಮಂಗಳ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.