ನಾಪೆÇೀಕ್ಲು, ಡಿ. 19: ಇತ್ತೀಚಿನ ಕೆಲವು ವರ್ಷಗಳಿಂದ ಹವಾಮಾನ ವೈಪರಿತ್ಯದ ಕಾರಣ ಬೇಸಿಗೆಗಾಲ, ಮಳೆಗಾಲ, ಚಳಿಗಾಲವೆಂಬದೇ ಜನರಿಗೆ ತಿಳಿಯದಂತಾಗಿದೆ. ಯಾವ ಸಂದರ್ಭ ಮಳೆ ಬರುವದೋ? ಯಾವ ಸಂದರ್ಭ ಬಿಸಿಲು ಬರುವದೋ? ದೇವರೇ ಬಲ್ಲ. ಈ ಕಾರಣದಿಂದ ಎಲ್ಲಾ ಬೆಳೆಗಳು ತಾವು ಹೂ ಬಿಡುವ, ಮಾಗುವ ಸಮಯದಲ್ಲಿ ಭಾರೀ ಏರುಪೇರು ಉಂಟಾಗಿದೆ.
ಈ ಕಾರಣದಿಂದ ಕೊಳಕೇರಿ ಗ್ರಾಮದ ಬೆಳೆಗಾರ ಕೇಟೋಳಿರ ಸದಾ ಬಿದ್ದಪ್ಪ ಅವರ ತೋಟದಲ್ಲಿ ಮಾರ್ಚ್ ತಿಂಗಳಿನಲ್ಲಿ ಹಣ್ಣಾಗಬೇಕಿದ್ದ ಪನ್ಯುರ್ ತಳಿಯ ಕಾಳುಮೆಣಸು ಬಳ್ಳಿಗಳಲ್ಲಿ ಕಾಳುಮೆಣಸು ಸಂಪೂರ್ಣವಾಗಿ ಹಣ್ಣಾಗಿದೆ. ಈಗ ಜಿಲ್ಲೆಯಲ್ಲಿ ಮೋಡ ತುಂಬಿದ ವಾತಾವರಣದ ನಡುವೆಯು ಫಸಲು ನಷ್ಟವನ್ನು ತಡೆಯುವ ಸಲುವಾಗಿ ಅವರು ಕಾಳುಮೆಣಸು ಕುಯ್ಲು ಆರಂಭಿಸಿರುವದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.