ಮಡಿಕೇರಿ, ಡಿ. 13: ವಿಶೇಷ ಹಾಗೂ ವಿಭಿನ್ನ ಸಂಸ್ಕøತಿ, ಪದ್ಧತಿಗಳನ್ನು ಒಳಗೊಂಡಿರುವ ಗೌಡ ಜನಾಂಗದ ಅರೆಭಾಷೆ, ಅಚಾರ, ವಿಚಾರ, ಸಂಸ್ಕøತಿಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವದು, ಸಾಹಿತ್ಯ ಹಾಗೂ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅರೆಭಾಷೆಯಲ್ಲಿ ಕಿರು ಚಿತ್ರಗಳ ಮೂಲಕ ಪ್ರಯತ್ನ ಸಾಗುತ್ತಿದೆ. ಇದೇ ಮೊಟ್ಟ ಮೊದಲ ಬಾರಿಗೆ ಯುವಕರ ತಂಡಗಳು ತಾವೇ ನಿರ್ದೇಶಿಸಿ, ನಿರ್ಮಿಸಿದ ಚಿತ್ರವೊಂದು ಈಗಾಗಲೇ ಬಿಡುಗಡೆಗೊಂಡಿದ್ದು ಮತ್ತೊಂದು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ನೆರೆಮನೆ ಮಕ್ಕ

ಬೆಂಗಳೂರಿನಲ್ಲಿ ನೆಲೆಸಿರುವ ತರುಣ್ ಕೂಡಕಂಡಿ ಚಿತ್ರಕಥೆ ಬರೆದು ನಿರ್ದೇಶಿಸಿರುವ ನೆರೆಮನೆ ಮಕ್ಕ ಚಿತ್ರ ಈಗಾಗಲೇ ಬಿಡುಗಡೆ ಗೊಂಡಿದ್ದು, ಸಾಮಾಜಿಕ ಜಾಲ ತಾಣವಾದ ಯೂಟ್ಯೂಬ್ ಹಾಗೂ ವ್ಯಾಟ್ಸ್ ಆಪ್‍ಗಳಲ್ಲಿ ಪ್ರದರ್ಶನ ವಾಗುತ್ತಿದೆ. ಹುತ್ತರಿ ಹಬ್ಬದಂದು ಬೆಂಗಳೂರಿನ ಕೊಡಗು ಗೌಡ ಸಮಾಜದಲ್ಲಿ ಅಲ್ಲಿನ ಕೊಡಗು ಗೌಡ ಯುವ ವೇದಿಕೆಯ ಸಹಯೋಗ ದೊಂದಿಗೆ ಸಮಾಜದ ಅಧ್ಯಕ್ಷ ಅಮ್ಮವ್ವನ ವಾಸು ಅವರು ಬಿಡುಗಡೆ ಮಾಡಿದರು. ಅರೆಭಾಷೆ ಸಂಸ್ಕøತಿ, ಸಾಹಿತ್ಯ ಮತ್ತು ಕೃಷಿ ಪದ್ಧತಿಯನ್ನು ಉಳಿಸುವ, ಬೆಳೆಸುವ ಸಂದೇಶ ಸಾರುವ ಚಿತ್ರದಲ್ಲಿ ಕಾನಡ್ಕ ಅನು, ಅಂಕಿತ ಮುಕ್ಕಾಟಿ, ದಿಶಾ ಕೊಡಪಾಲು, ತೇಜಿತ ಪೊನ್ನೆಟ್ಟಿ, ತರುಣ್ ಕೂಡಕಂಡಿ, ಗೀತೇಶ್ ಉಳುವಾರನ, ಸುಜಿತ್ ನಂಗಾರು, ಯತಿನ್ ಚಪ್ಪೇರ, ದರ್ಶನ್ ಮುಕ್ಕಾಟಿ ಪಾತ್ರದಾರಿಗಳಾಗಿದ್ದಾರೆ. ವಿನಯ್ ಗೌಡ ಕ್ಯಾಮರಾಮೆನ್ ಅಗಿ ಕಾರ್ಯನಿರ್ವಹಿಸಿದ್ದಾರೆ.

ನೆಂಟತಿ ಗೂಡೆ

ವಿಷ್ಣು ಕ್ರಿಯೆಷನ್ಸ್ ಬ್ಯಾನರ್‍ನಡಿ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ. ಕೊಡಗಿನ ಯೋಧನೋರ್ವನ ಜೀವನ ಕಥಾ ಹಂದರ ಹೊಂದಿರುವ ಕೌಟುಂಬಿಕ ಚಿತ್ರದಲ್ಲಿ ಸಂಬಂಧಗಳ, ಸಹೋದರತ್ವದ ಬಗ್ಗೆ ಸಂದೇಶವಿದೆ. ಕೊಡಗಿನ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದ್ದು. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಕಳಂಜನ ವಿಷ್ಣು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದ ಸಹ ನಿರ್ದೇಶಕನಾಗಿ ತೋರೇರ ಹೇಮಂತ್, ಚಿತ್ರಕಥೆ ತೋರೆರ ಸಚಿನ್ ಅವರದ್ದಾಗಿದ್ದು, ದಿವಾಕರ್ (ಜಾಕಿ) ಅವರ ಕ್ಯಾಮರಾ ಕೈಚಳಕವಿದೆ.

ಚಿತ್ರದ ತಾರಾಂಗಣದಲ್ಲಿ ಕುಡೆಕಲ್ ಸಂತೋಷ್, ಸವಿತಾ ಸಂತೋಷ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಕಡ್ಯದ ಜಾಗೃತಿ, ಕಳಂಜನ ವಿಷ್ಣು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಡೆಕಲ್ ನಿಹಾಲ್, ಸಾಗರಿಕ ಕುಡೆಕಲ್, ಕುಸುಮ ಕುಯ್ಯಮುಡಿ, ಹರ್ಷ ಕೇಟೋಳಿ, ಪವನ್ ಗೊದ್ದೆಟ್ಟಿ, ಕಾನೆಹಿತ್ಲು ಹರ್ಷಿತ್, ಬೈತಡ್ಕ ತುಷಿತ್, ಮರದಾಳು ಚೇತನ್ ಇನ್ನಿತರರು ಪಾತ್ರಧಾರಿ ಗಳಾಗಿದ್ದಾರೆ. ಮಾಸಾಂತ್ಯದಲ್ಲಿ ಚಿತ್ರ ಬಿಡುಗಡೆ ಆಗಲಿದೆ.