ವೀರಾಜಪೇಟೆ, ಡಿ. 11: ನಗರದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯ ಅವರಣದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ನುರಿತ ವೈದ್ಯರಿಂದ ಒಂದು ದಿನದ ಉಚಿತ ಹೃದಯ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾಜಪೇಯಿ ಅರೋಗ್ಯಶ್ರೀ ಯೋಜನೆಅಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಇಂಡಿಯ ಹಾಸ್ಪಿಟಲ್ ಮತ್ತು ಹಾರ್ಟ್ ಇನ್‍ಸ್ಟಿಟ್ಯೂಟ್ ಮಂಗಳೂರು ಇವರುಗಳ ಸಂಯುಕ್ತ ಅಶ್ರಯದಲ್ಲಿ ಶಿಬಿರ ನಡೆಯಿತು.